ತುಮಕೂರು | ತುಮಕೂರು (Tumkur) ಜಿಲ್ಲೆಯಲ್ಲಿ ಇತಿಹಾಸ ಪ್ರಸಿದ್ಧವಾಗಿರುವ ಪ್ರವಾಸಿ ತಾಣದ ಜೊತೆಗೆ ಧಾರ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ದೇವರಾಯನದುರ್ಗದ (Devarayana durga) ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮ ರಥೋತ್ಸವಕ್ಕೆ (Shri Lakshmi Narasimha Swami Brahma Rathotsava) ಇದೀಗ ಅಧಿಕೃತವಾಗಿ ದಿನಾಂಕ ನಿಗದಿಯಾಗಿದೆ.
Jyoti Ganesh | ತುಮಕೂರಿನಲ್ಲಿ ಕೇಸರಿ ಬಾವುಟ ಕಟ್ಟುವುದಕ್ಕೂ ಒಂದು ರೂಲ್ಸ್ ..! – karnataka360.in
ಕರಿಗಿರಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ದೇವರಾಯನ ದುರ್ಗದ ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮಾರ್ಚ್ 17 ರಿಂದ 29 ರವರೆಗೆ ನಡೆಯಲಿದ್ದು ಮಾರ್ಚ್ 24ರಂದು ಮಧ್ಯಾಹ್ನ ಒಂದು ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ನಡೆಯಲಿದೆ.
ವಿಶೇಷ ಪೂಜಾ ಕಾರ್ಯಕ್ರಮಗಳ ಮಾಹಿತಿ
ಮಾ.17 ರಂದು ಸಂಜೆ 7ಕ್ಕೆ ಅಂಕುರಾರ್ಪಣ, ಮಾರ್ಚ್ 18ರಂದು ಸಂಜೆ 7.30ಕ್ಕೆ ಧ್ವಜಾರೋಹಣ, ಮಾ.19 ರಂದು ರಾತ್ರಿ 7ಕ್ಕೆ ಶೇಷವಾಹನೋತ್ಸವ, ಮಾ.20ರಂದು ರಾತ್ರಿ 7ಕ್ಕೆ ಸಿಂಹಾರೋಹಣ, ಮಾ.21ರಂದು ಬೆಳಿಗ್ಗೆ ಪುಷ್ಪರಥ, ಮಾ.22ರಂದು ಸಂಜೆ 6ಕ್ಕೆ ಪ್ರಹ್ಲಾದೋತ್ಸವ ನಂತರ ರಾತ್ರಿ 12ಗಂಟೆಗೆ ರಾಮಾನುಜಕೂಟ ಸೇವೆ ಹಾಗೂ 12.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ. ಮಾ.23ರಂದು ಮಧ್ಯಾಹ್ನ 12ಕ್ಕೆ ಗರುಡವಾಹನ, ಸಂಜೆ 5ಕ್ಕೆ ಗಜೇಂದ್ರ ಮೋಕ್ಷ, ಸಂಜೆ 6ಕ್ಕೆ ನವಿಲು ವಾಹನ ಹಾಗೂ ರಾತ್ರಿ 7ಕ್ಕೆ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯುತ್ತದೆ.
ಮಾರ್ಚ್ 25ರಂದು ಮಧ್ಯಾಹ್ನ 12ಕ್ಕೆ ಸೂರ್ಯಮಂಡಲೋತ್ಸವ, ರಾತ್ರಿ 8ಗಂಟೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ರಾತ್ರಿ 10ಕ್ಕೆ ಅಶ್ವವಾಹನೋತ್ಸವ ಇರುತ್ತದೆ. ಮಾ.26ರಂದು ಬೆಳಿಗ್ಗೆ 11ಕ್ಕೆ ತೀರ್ಥಸ್ನಾನ, ಮಧ್ಯಾಹ್ನ1.30ಕ್ಕೆ ಉಯ್ಯಾಲೋತ್ಸವ, ರಾತ್ರಿ 7.30ಕ್ಕೆ ಕುಂಭಿ ದೇವಸ್ಥಾನದಲ್ಲಿ ಧ್ವಜಾರೋಹಣ, ರಾತ್ರಿ 9.30ಕ್ಕೆ ಚಿತ್ರಗೋಪುರೋತ್ಸವ, ರಾತ್ರಿ10ಕ್ಕೆ ಜಲಕ್ರೀಡೆ ಉತ್ಸವ ಜರುಗಲಿದೆ. ಮಾ.27ರಂದು ರಾತ್ರಿ 9ಕ್ಕೆ ದವನೋತ್ಸವ, ಮಾ.28ರಂದು ಬೆಳಿಗ್ಗೆ 9.30ಕ್ಕೆ ಉಯ್ಯಾಲೋತ್ಸವ, 10.30ಕ್ಕೆ ಕುಂಭಿಬೆಟ್ಟದಲ್ಲಿ (ಪ್ರಾಕಾರೋತ್ಸವ) ಮತ್ತು ಪ್ರಸಾದ ವಿನಿಯೋಗ, ರಾತ್ರಿ 9ಕ್ಕೆ ಹನುಮಂತೋತ್ಸವ, 10.30ಕ್ಕೆ ಶಯನೋತ್ಸವ ಹಾಗೂ ಮಾ.29ರಂದು ಬೆಳಿಗ್ಗೆ 9.30ಕ್ಕೆ ಮಹಾಭಿಷೇಕ ಹಾಗೂ ಮಧ್ಯಾಹ್ನ 12ಕ್ಕೆ ಗರುಡೋತ್ಸವ ನಡೆಯುತ್ತದೆ.
ಮಾರ್ಚ್ 17ರಿಂದ ಮಾರ್ಚ್ 29ರವರೆಗೆ ರಥೋತ್ಸವ ದಿನ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಶ್ರೀ ಸ್ವಾಮಿಗೆ ಅಭಿಷೇಕ ನಡೆಯುತ್ತದೆ. ರಥೋತ್ಸವ ದಿನದಂದು ಮಾತ್ರ ಮುಂಜಾನೆ 4ಗಂಟೆಗೆ ಅಭಿಷೇಕ ಇರುತ್ತದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.