ಬೆಂಗಳೂರು | ಬಿಜೆಪಿ ಪಕ್ಷದ ವರಿಷ್ಠರನನ್ನು ಭೇಟಿ ಮಾಡಿದ ಮಾಜಿ ಶಾಸಕ ಸಿ ಪಿ ಯೋಗೇಶ್ವರ್ ಮಾದ್ಯಮದೊಂದಿಗೆ ಮಾತನಾಡಿದ್ದು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಅದೆಲ್ಲವನ್ನು ಮರೆತು ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಇಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ ತೀರ್ಮಾನ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎಂದು ಹೇಳಲಾಗುತ್ತಿದೆ ಮುಂದಿನ ದಿನಗಳಲ್ಲಿ ಕಾದು ನೊಡೋಣ ಎಂದರು.
ಸಂಸದ ಡಿಕೆ ಸುರೇಶ್ ವೈರಾಗ್ಯದ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಷ್ಟು ಸುಲಭವಾಗಿ ರಾಜಕಾರಣ ಬಿಟ್ಟು ಹೋಗುವಂತಹ ವ್ಯಕ್ತಿತ್ವ ಅಲ್ಲ. ಅಣ್ಣನನ್ನು ಮುಖ್ಯಮಂತ್ರಿ ಮಾಡಲು ದೆಹಲಿ ರಾಜಕಾರಣಕ್ಕಿಂತ ರಾಜ್ಯ ರಾಜಕಾರಣಕ್ಕೆ ಒತ್ತು ಕೊಡುತ್ತಿರಬಹುದು ಎಂದು ಸುರೇಶ್ ವಿರುದ್ಧ ಮೃದು ಮಾತುಗಳನ್ನಾಡಿದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ರಾಜಕಾರಣದ ಬಗ್ಗೆ ಪಕ್ಷದ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದ ಅವರು. ಇಂದಿನ ನಮ್ಮ ದುಸ್ಥಿತಿಗೆ ನಮ್ಮ ಹಿರಿಯ ನಾಯಕರು ಕಾರಣ ಎಂದು ಆರೋಪ ಮಾಡಿದರು ಜೊತೆಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದು ನಿಜ ಎಂದು ಒಪ್ಪಿಕೊಂಡರು.
ಬಿಜೆಪಿ ಸೋಲಿಗೆ ಆಡಳಿತದ ವೈಫಲ್ಯ, ಸಚಿವ ಸಂಪುಟ ಸಂಪೂರ್ಣ ವಿಸ್ತರಣೆ ಮಾಡದಿರುವುದು, ಕಾಂಗ್ರೆಸ್ ಸುಳ್ಳು ಆರೋಪಕ್ಕೆ ಸಮರ್ಥವಾಗಿ ಉತ್ತರ ನೀಡದೇ ಇರುವುದು ಎಲ್ಲವು ಕಾರಣವಾಗಿದೆ ಎಂದರು.