Wednesday, February 5, 2025
Homeಜಿಲ್ಲೆಬೆಂಗಳೂರು ನಗರDarshan case | ದರ್ಶನ್ ಸರ್ಜರಿ ಮಾಡಿಸದೆ ಆಸ್ಪತ್ರೆಯಿಂದ ಮನೆಗೆ ಹೊರಟಿದ್ಯಾಕೆ..?  ಬೇಲ್ ಸಿಕ್ರು 6...

Darshan case | ದರ್ಶನ್ ಸರ್ಜರಿ ಮಾಡಿಸದೆ ಆಸ್ಪತ್ರೆಯಿಂದ ಮನೆಗೆ ಹೊರಟಿದ್ಯಾಕೆ..?  ಬೇಲ್ ಸಿಕ್ರು 6 ಜನಕ್ಕೆ ಬಿಡುಗಡೆ ಭಾಗ್ಯವಿಲ್ಲ..?

ಬೆಂಗಳೂರು : ಕಳೆದ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ (Darshan case) ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮಧ್ಯಂತರ ಜಾಮೀನು ಆಧಾರದ ಮೇಲೆ ಬಂದು ಟ್ರೀಟ್ಮೆಂಟ್ ಪಡೆದಿದ್ದ ದರ್ಶನ್. ಕೇವಲ ಫಿಜಿಯೋಥೆರಪಿ ಮಾಡಿಸಿ ಬೇಲ್ ಸಿಗ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬೇಲ್ ಕೊಟ್ಟ ಬೆನ್ನಲ್ಲೆ ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಯಾವಾಗ ಬೇಕಾದ್ರೂ ಸರ್ಜರಿ ಮಾಡಿಸಿಕೊಳ್ಳಬಹುದೆಂದು ಕುಟುಂಬದ ಅಭಿಫ್ರಾಯ. ಹೀಗಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳುವ ಸಾಧ್ಯತೆ ಇದೆ.

ವೈದ್ಯರ ಸಲಹೆ ಮೇರೆಗೆ ಮಧ್ಯಾಹ್ನದ ಮೇಲೆ ದರ್ಶನ್ ಗೆ ಆಸ್ಪತ್ರೆಯಿಂದ ಬಿಡುಗಡೆ ಭಾಗ್ಯ ಸಿಗಲಿದೆ. ಸರ್ಜರಿ ಅವಶ್ಯಕತೆ ಇದೆ ಅಂದ್ರೆ ಆಸ್ಪತ್ರೆಗೆ ಮತ್ತೆ ದಾಖಲು ಆಗುವ ಸಾಧ್ಯತೆ ಕೂಡ ಇದೆ. ಸದ್ಯಕ್ಕೆ ಸರ್ಜರಿಯಿಂದ ದೂರ ಉಳಿದಿದ್ದಾರೆ ನಟ ದರ್ಶನ್. ಹಾಗಿದ್ರೆ ಫಿಸಿಯೋಥೆರಪಿಯಲ್ಲೆ ಕಡಿಮೆ ಆಯ್ತಾ ನಟ ದರ್ಶನ್ ಬೆನ್ನುನೋವು ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಮುಂದೆ ಬೆನ್ನನೋವು ಕಂಡುಬಂದ್ರೆ ಆಸ್ಪತ್ರೆಗೆ ಬರುವಂತೆ ವೈದ್ಯರು ಸೂಚನೆ ನೀಡಿದ್ದಾರೆ. ಸದ್ಯ ರೆಸ್ಟ್ ಮಾಡುವಂತೆ ನಟ ದರ್ಶನ್ ಗೆ ವೈದ್ಯರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

6 ಮಂದಿ ಆರೋಪಿಗಳು ಜೈಲಿನಿಂದ ಹೊರಗೆ ಬರ್ತಾರ..?  

ರೇಣುಕಾ ಹತ್ಯೆ ಕೇಸ್ ನಲ್ಲಿ 6 ತಿಂಗಳ ಬಳಿಕ ಪವಿತ್ರ ಗೌಡ ಸೇರಿ ಆರು ಆರೋಪಿಗಳಿಗೆ ಬಿಡುಗಡೆ ಭಾಗ್ಯ ಅಂದ್ರೆ ಜಾಮೀನು ಸಿಕ್ಕಿದೆ. ಇಂದು ಜಾಮೀನು ಪಡೆದ ಆರು ಆರೋಪಿಗಳು ಜೈಲಿನಿಂದ ಹೊರಗೆ ಬರಲಿದ್ದಾರೆ. ಪವಿತ್ರ ಗೌಡ, ಲಕ್ಷ್ಮಣ್, ನಾಗರಾಜ್, ಜಗದೀಶ್, ಪ್ರದೋಷ್, ಅನುಕುಮಾರ್ ಬಿಡುಗಡೆಯಾಗಲಿದ್ದಾರೆ.  

ಈಗಾಗಲೇ ಶುಕ್ರವಾರ ಏಳು ಜನರಿಗೆ ಷರತ್ತು ಬದ್ಧ ಜಾಮೀನು ನೀಡಿದೆ ಹೈಕೋರ್ಟ್, ನಟ ದರ್ಶನ್ ಮೆಡಿಕಲ್ ಬೇಲ್ ಮೇಲೆ‌ ಹೊರಗೆ ಇದ್ದಾರೆ. ಉಳಿದು ಆರು ಜನರು ಕೆಳಹಂತದ ನ್ಯಾಯಲಯದಲ್ಲಿ ಷರತ್ತು ಪೂರ್ಣ ಮಾಡಿ ರಿಲೀಸ್ ಆಗಲಿದ್ದಾರೆ.  ಷರತ್ತು ಪೂರ್ಣಗೊಂಡು ಜೈಲಿಗೆ ಆರ್ಡರ್ ಕಾಪಿ ತಲುಪಿದ್ರೆ ಬಿಡುಗಡೆ ಪಕ್ಕಾ. ಒಂದುವೇಳೆ ಸಂಜೆ ಏಳು ಗಂಟೆ ಒಳಗೆ ಆರ್ಡರ್ ಕಾಪಿ ಜೈಲಿಗೆ ತಲುಪಿಲ್ಲ ಅಂದರೆ ರಿಲೀಸ್ ಭಾಗ್ಯವಿಲ್ಲ ಎನ್ನಲಾಗಿದೆ.

ಯಾರು ಯಾವ ಜೈಲು

1. ಲಕ್ಷ್ಮಣ್ -ಶಿವಮೊಗ್ಗ ಕಾರಾಗೃಹ

2. ನಾಗರಾಜ್- ಕಲ್ಬುರ್ಗಿ ಕಾರಾಗೃಹ

3. ಜಗದೀಶ್ -ಶಿವಮೊಗ್ಗ ಕಾರಾಗೃಹ

4. ಪ್ರದೂಷ್ -ಬೆಂಗಳೂರು ಕಾರಾಗೃಹ

5. ಪವಿತ್ರ ಗೌಡ-ಬೆಂಗಳೂರು ಕಾರಾಗೃಹ

6.ಅನುಕುಮಾರ್-ಬೆಂಗಳೂರು ಕಾರಾಗೃಹ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments