ಕೃಷಿ ಮಾಹಿತಿ | ಪಶುಪಾಲನಾ (animal husbandry) ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ (Farmers) ಆಧುನಿಕ ಹೈನುಗಾರಿಕೆ (Dairy training) ಕುರಿತು ಆಸಕ್ತ 25 ಮಂದಿ ರೈತರಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಮುಖ್ಯ ಪಶುವೈದ್ಯಾಧಿಕಾರಿ (Veterinary Officer) ತಿಳಿಸಿದ್ದಾರೆ.
DC Shub Kalyan | ಜಿಲ್ಲಾಧಿಕಾರಿ ಅಂದ್ರೆ ತುಮಕೂರು ಡಿಸಿ ಶುಭ ಕಲ್ಯಾಣ್ ರೀತಿ ಇರಬೇಕು..? – karnataka360.in
ಆಧುನಿಕ ಹೈನುಗಾರಿಕೆ ತರಬೇತಿಯನ್ನು ಮೇ 7 ಮತ್ತು 8 ರಂದು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ನಿಗಧಿಪಡಿಸಿದ ದಿನಾಂಕದಂದು ಬೆಳಿಗ್ಗೆ 10 ಗಂಟೆಗೆ ತರಬೇತಿಗೆ ಹಾಜರಾಗಬಹುದಾಗಿದೆ.
ತರಬೇತಿಗೆ ಹಾಜರಾಗಲು ಇಚ್ಛಿಸುವವರು 2 ಪಾಸ್‌ಪೋರ್ಟ್ ಅಳತೆ ಭಾವಚಿತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದಲ್ಲಿ) ವನ್ನು ಕಡ್ಡಾಯವಾಗಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪಶುವೈದ್ಯಕೀಯ ಸಂಸ್ಥೆ ಅಥವಾ ಪಶುವೈದ್ಯಕೀಯ ತರಬೇತಿ ಕೇಂದ್ರ, ಕಾಲ್‌ಟೆಕ್ಸ್ ಸರ್ಕಲ್, ಕುಣಿಗಲ್ ರಸ್ತೆ, ತುಮಕೂರು, ದೂರವಾಣಿ ಸಂಖ್ಯೆ 0816-2251214ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.