ತುಮಕೂರು | ತ್ರಿವಿಧ ದಾಸೋಹದ ಬೀಡಾಗಿರುವ ತುಮಕೂರು ನಗರದಲ್ಲಿರುವ ಶ್ರೀ ಸಿದ್ದಗಂಗಾ ಮಠಕ್ಕೆ ನಟ, ನಿರ್ಮಾಪಕ ಡಾಲಿ ಧನಂಜಯ್ (Daali Dhananjaya) ಅವರು ಭೇಟಿ ನೀಡಿ ಶ್ರೀ ಸಿದ್ದಲಿಂಗ ಶ್ರೀಗಳ ಆಶಿರ್ವಾದವನ್ನು ಪಡೆದರು.
ಇದೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದಗಂಗಾ ಮಠಕ್ಕೆ ನಾನು ಬರ್ತಾನೇ ಇರ್ತಿನಿ. ಇಲ್ಲಿಗೆ ಯಾವಾಗ ಬರೋಕು ನನಗೆ ಖುಷಿನೇ. ಸಾವಿರಾರು ಮಕ್ಕಳಿಗೆ ಎಜುಕೇಶನ್ ಕೊಡೋ ಜಾಗ ಇದು. ಸಾವಿರಾರು ಜನಕ್ಕೆ ಊಟ ಹಾಕುವ ಜಾಗ. ಸಾವಿರಾರು ಜನರ ಭವಿಷ್ಯ ಕಟ್ಟಿಕೊಟ್ಟ ಜಾಗ ಇದು. ಗುರುಗಳು, ಸ್ವಾಮೀಜಿ ಅವರನ್ನ ನನ್ನ ಮದುವೆಗೆ ಕರೆಯಬೇಕಿತ್ತು. ಹಾಗಾಗಿ ಬಂದೆ, ಪೂಜೆ ಮುಗಿಸಿ, ಮದುವೆ ಆಮಂತ್ರಣ ಪತ್ರಿಕೆ ಕೊಟ್ಟು ಹೋಗ್ತಾ ಇದ್ದೀನಿ ಎಂದರು.
ಗುರು-ಹಿರಿಯರು ಬಂದು ಹರಸಿದರೇ ಅಲ್ವಾ ಒಳ್ಳೆದು ಆಗೋದು. ಮದುವೆ ಪ್ರೀಪರೇಷನ್ ನಡಿತಾ ಇದೆ. ಆಮಂತ್ರಣ ಪತ್ರಿಕೆ ಕೊಡೋದು. ಎಲ್ಲಾ ಹಿರಿಯರಿಗೆ, ಲೀಡರ್ಸ್ ಗೆ, ಫ್ಯಾಮಿಲಿ ಅವರನ್ನ ಕರಿತಾ ಇರ್ತೀವಿ. ನಮ್ಮ ಸಿನಿಮಾದವರನ್ನ ಕರೆಯೋಕೆ ಶುರು ಮಾಡ್ಬೇಕು. ಅಭಿಮಾನಿಗಳಿಗೂ ಸಹ ಖಂಡಿತ ಇನ್ವೈಟ್ ಮಾಡ್ತಿನಿ ಎಂದು ಹೇಳಿದರು.
ಶ್ರೀಸಿದ್ದಗಂಗಾ ಮಠದಲ್ಲಿ ಪುನೀತ್ ರಾಜ್ ಕುಮಾರ್ ನೆನಪು ಮಾಡಿಕೊಂಡ ಡಾಲಿ
ಸಿದ್ದಗಂಗಾ ಮಠಕ್ಕೆ ನಟ ಡಾಲಿ ಧನಂಜಯ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ಮೇಲೆ ವೆಡ್ಡಿಂಗ್ ಕಾರ್ಡ್ ಇಟ್ಟು ಪೂಜೆ ಸಲ್ಲಿಕೆ ಮಾಡಿದರು. ಗದ್ದುಗೆಗೆ ಸಹಸ್ರನಾಮಾರ್ಚನೆ ಪೂಜೆ ಸಲ್ಲಿಸಿದರು. ಸಿದ್ದಲಿಂಗ ಸ್ವಾಮೀಜಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದರು. ಇನ್ನೂ ಇದೆ ವೇಳೆ ಮಠಕ್ಕೆ ಪುನೀತ್ ರಾಜ್ ಕುಮಾರ್ ಜೊತೆಗೆ ಬಂದಿದ್ದನ್ನು ನೆನಪು ಮಾಡಿಕೊಂಡರು. ಡಾಲಿ ಧನಂಜಯನನ್ನ ನೋಡಿ ಸೆಲ್ಪಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿ ಬಿದ್ದರು.