ತುಮಕೂರು | ಕೊರಟಗೆರೆ ತಾಲೂಕಿನ ಗುಂಡನಪಾಳ್ಯ ಹಾಗೂ ಕೊರಟಗೆರೆ ಮಾರ್ಗ ಮಧ್ಯ ಜಯಮಂಗಲಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಮೇಲ್ಭಾಗದ ಸಿಸಿ ಕಾಮಗಾರಿ ಹಾಗೂ ಪಿಚಿಂಗ್ ಕಾಮಗಾರಿ ಕಳಪೆಯಾಗಿದ್ದು , ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಲೋಕೋಪಯೋಗಿ ಇಲಾಖೆಯ 4.80 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿರುವ ಪಿಚ್ಚಿಂಗ್ ಹಾಗೂ ಸೇತುವೆ ಮೇಲ್ಭಾಗದ ಕಾಂಕ್ರೀಟ್ ಕಾಮಗಾರಿ ನದಿಯ ಮರಳನ್ನೆ ಬಳಸಿ ಕಾಮಗಾರಿ ನಿರ್ವಹಣೆ ಮಾಡಲಾಗಿದೆ. ಜೊತೆಗೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಲಾಗುತ್ತಿದೆ.
ಕಾಮಗಾರಿ ಲೋಪವಾಗಿರುವ ಬಗೆ ಆರೋಪಗಳು ಕೇಳಿ ಬರುತ್ತಿದ್ದು ಕ್ರಮ ತೆಗೆದುಕೊಳ್ಳುವಂತೆ ಹಾಗೂ ವರದಿ ನೀಡುವಂತೆ ಇಂಜಿನಿಯರಿಗೆ ತಿಳಿಸಲಾಗಿದೆ.
ಸೇತುವೆಯ ಮೇಲ್ಭಾಗದ ಕಾಂಕ್ರೀಟ್ ಕಾಮಗಾರಿ ಹಾಗೂ ಪಿಚಿಂಗ್ ಕಾಮಗಾರಿ ಕಳಪೆಯಿಂದ ಕೂಡಿದ್ದು ಈ ಕಾಮಗಾರಿಗೆ ನದಿಯ ಮರಳನ್ನೇ ಬಳಸಿ ಕಾನೂನು ಬಹಿರವಾಗಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಇದರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.