ಬೆಂಗಳೂರು ಗ್ರಾಮಾಂತರ | ಜಿಲ್ಲೆಯ ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ತೆಲ್ಲೋಹಳ್ಳಿ ಗ್ರಾಮದ ಸರ್ವೆ ನಂಬರ್ 8/3 ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ನೀಲಗಿರಿ ಮರಗಳನ್ನ ತೆರವುಗೊಳಿಸುವ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮುಕಿ ನಡೆದ ಘಟನೆ ನಡೆದಿದೆ.
ತೆಲ್ಲೋಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿನ ಸರ್ವೆ ನಂಬರ್ 8/3 ರಲ್ಲಿ ನೀಲಗಿರಿ ಮರಗಳನ್ನು ತೆರವುಗೊಳಿಸಲು ಜೆ.ಸಿ.ಬಿ ಗಳು ಕೆಲಸ ಮಾಡುವ ಸಮಯದಲ್ಲಿ ಈ ಜಮೀನು ನನ್ನದು ಎಂದು ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದ್ದರೂ ಅತಿಕ್ರಮ ಪ್ರವೇಶ ಮಾಡಿ ದೌರ್ಜನ್ಯದಿಂದ ನೀಲಗಿರಿ ಮರಗಳನ್ನು ತೆರವುಗೊಳಿಸುತ್ತಿರುವುದರ ವಿಚಾರವಾಗಿ ಎರಡು ಗುಂಪಿನನಡುವೆ ಮಾತಿನ ಚಕಮುಕಿ ನಡೆದಿತ್ತು, ಈ ವೇಳೆ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಆಗಮಿಸಿದದ್ರು.
ಜಮೀನು ಮಾಲೀಕ ರಮೇಶ್ ಮಾತನಾಡಿ, ಈ ಹಿಂದೆ 1961 ರಲ್ಲಿ ನಮಗೆ ಮಾರಾಟ ಮಾಡಿರುವ ದಾಖಲೆಗಳು ಇದ್ದು ಆದರೆ ಎದುರುದಾರರ ಹೆಸರಿನಲ್ಲಿ ಆರ್.ಟಿ.ಸಿ ಬರುತ್ತಿದೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ಜಮೀನು ಎಂದು ಬಂದು ಗಲಾಟೆ ಮಾಡಿ ನಮ್ಮ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಮ್ಮ ದಾಖಲೆಗಳನ್ನು ಒಳ್ಳೆಯ ವಕೀಲರ ಬಳಿ ಪರಿಶೀಲಿಸಿ ಮುಂದುವರೆಯಬಹುದು, ಅದನ್ನು ಬಿಟ್ಟು ವಿನಾಕಾರಣ ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿರುವುದು ದೌರ್ಜನ್ಯವಾಗಿದೆ. ಇಂತಹ ಜಮೀನುಗಳ ಮೇಲೆ ಡಿಸ್ಪೂಟ್ ಮಾಡಿಸಿ ಹಣ ಮಾಡುವ ದಂಧೆಕೋರರು ಜಾಸ್ತಿಯಾಗಿದ್ದಾರೆ ಅವರ ಮಾತು ಕೇಳಿ ಈ ರೀತಿ ತೊಂದರೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ರಾಮಮೂರ್ತಿ ಮಾತನಾಡಿ, ಈ ಜಮೀನು ನಮಗೆ ಸೇರಿದ್ದು ಇದರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಇದ್ದರೂ ಉಲ್ಲಂಗಿಸಿ ಪೊಲೀಸರು ಎದುರೇ ಮರಗಳನ್ನು ಕತ್ತರಿಸುತ್ತಿದ್ದಾರೆ . ನಮ್ಮ ಬಳಿ ಹಣ ಪಡೆದು ನ್ಯಾಯಾಲಯದಲ್ಲಿ ಮೂರು ತಿಂಗಳ ಗಡುವು ನೀಡಿದ್ದರೂ ಏಕಾಏಕಿ ಕೃತ್ಯ ಎಸಗುತ್ತಿದ್ದಾರೆ. ನ್ಯಾಯಸ್ಥರ ಸಮ್ಮುಖದಲ್ಲಿ ಹಣ ಪಡೆದು ಜಾಗ ಬಿಟ್ಟುಕೊಡುವುದಾಗಿ ತಿಳಿಸಿ ಈಗ ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆಲ್ಲಾ ಕಾರಣ ಭೂಮಿ ಬೆಲೆ ಗಗನಕ್ಕೇರಿದ ಪರಿಣಾಮ ಒಂದು ಇಂಚಿಗೂ ಕೋರ್ಟ್ ಮೆಟ್ಟಿಲೇರಿ ತಮ್ಮ ಜೀವನವನ್ನೇ ನ್ಯಾಯಾಲಯದ ಬಾಗಿಲಿಗೆ ಅಲೆಯುವುದರಲ್ಲೇ ಕಳೆಯುತ್ತಿರುವುದು ವಿಪರ್ಯಾಸೆವೇ ಸರಿ.