Site icon Karnataka 360

Child Abuse | ಎರಡುವರೆ ವರ್ಷದ ಮಗುವನ್ನು ಬಿಡದ ಕಾಮುಕ

ಮಹಾರಾಷ್ಟ್ರ | ಉಲ್ಲಾಸ್‌ನಗರದಲ್ಲಿ ಮನ ನಡುಗುವಂತಹ ಘಟನೆ ನಡೆದಿದೆ. ಕೇವಲ ಎರಡೂವರೆ ವರ್ಷದ ಮಗುವಿನ (Child Abuse) ಮೇಲೆ ಬೇಸಿಗೆ ಶಿಬಿರದಲ್ಲಿ ನೃತ್ಯ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಎದುರಾಗಿದೆ. 45 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ನೋವಿನಿಂದ ಬಳಲುತ್ತಿದ್ದ (Child Abuse) ಮಗು

ಮಗು ತೀವ್ರ ನೋವಿನಿಂದ ಬಳಲುತ್ತಿದ್ದ ಸಂದರ್ಭವನ್ನು ಗಮನಿಸಿದ ಪೋಷಕರು, ಶಂಕೆ ವ್ಯಕ್ತಪಡಿಸಿ ವಿಚಾರಿಸಿದಾಗ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಮಗು ತನ್ನ ದುಃಖವನ್ನು ವ್ಯಕ್ತಪಡಿಸಲಾಗದ ಪರಿಸ್ಥಿತಿಯಲ್ಲಿ ನೋವಿನಿಂದ (Child Abuse) ತತ್ತರಿಸಿತ್ತು. ಈ ಹಿನ್ನೆಲೆಯಲ್ಲಿ ಪೋಷಕರು ವಿಠ್ಠಲವಾಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಉಲ್ಲಾಸ್‌ನಗರ ಡಿಸಿಪಿ ಸಚಿನ್ ಗೋರ್ ಮತ್ತು ಠಾಣೆಯ ಹಿರಿಯ ಅಧಿಕಾರಿ ಅನಿಲ್ ಪಡ್ವಾಲ್ ನೇತೃತ್ವದಲ್ಲಿ ಆರೋಪಿಯನ್ನು ಆತನ ನಿವಾಸದಿಂದ ಬಂಧಿಸಲಾಯಿತು.

ಇದನ್ನು ಓದಿ : Social Media Earnings | ಸೋಶಿಯಲ್ ಮಿಡಿಯಾ ಬಳಕೆ ಮಾಡಿ ಹಣ ಸಂಪಾದಿಸಬಹುದು..?

ಮರುದಿನ ಆರೋಪಿಯನ್ನು ಉಲ್ಲಾಸ್‌ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಈ ಘಟನೆ ಸಾಮಾಜಿಕವಾಗಿ ಆಕ್ರೋಶ ಉಂಟುಮಾಡಿದ್ದು, ಮಕ್ಕಳ ಸುರಕ್ಷತೆಗೆ (Child Abuse) ಸಂಬಂಧಿಸಿದ ನಿಯಮಗಳು ಇನ್ನಷ್ಟು ಕಠಿಣಗೊಳ್ಳಬೇಕೆಂಬ ಹಂಬಲ ಹೆಚ್ಚಾಗಿದೆ.

Exit mobile version