ಚಿಕ್ಕಬಳ್ಳಾಪುರ | ಅಸಹಾಯಕಳಾದ ವಯೋವೃದ್ದೆ ಅತ್ತೆಯನ್ನ (Aged mother-in-law) ಸೊಸೆಯೋರ್ವಳು (daughter-in-law) ನಡುರಸ್ತೆಯಲ್ಲಿ ಮನಸೋ ಇಚ್ಚೆ ಥಳಿಸಿ ಧರ ಧರನೆ ಎಳೆದುಕೊಂಡು ತಿಪ್ಪೆಗೆ ನೂಕಿದ ಮನಕಲುಕುವ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕೊಂಡಪ್ಪಗಾರಪಲ್ಲಿ (Kondappagarapally) ಗ್ರಾಮದಲ್ಲಿ ನಡೆದಿದೆ.
ಗ್ರಾಮದ ವಯೋವೃದ್ದೆ ಅತ್ತೆ ವೆಂಕಟಲಕ್ಷಮ್ಮ ಮೇಲೆ ಆಕೆಯ ಸೊಸೆ ಲಕ್ಷೀದೇವಮ್ಮ ಮನುಷ್ಯತ್ವವನ್ನೇ ಮರೆತು ಮನೆಯಿಂದ ಹೊರಗಾಕಿದ್ದಲ್ಲದೆ ಬೀದಿ ಬದಿ ಅಸಹಾಯಕಳಾಗಿ ಮಲಗಿದ್ದ ವಯೋವೃದ್ದೆ ಅತ್ತೆಯನ್ನು ದರದರನೆ ಎಳದು ಎತ್ತಿ ಬಿಸಾಕಿ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ತೀವ್ರ ಅಸ್ವಸ್ಥಗೊಂಡ ವೃದ್ದೆಯನ್ನ ಸ್ಥಳೀಯರು ರಕ್ಷಿಸಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಚಿತ್ರಹಿಂಸೆ ಕೊಡುವ ದೃಶ್ಯವನ್ನ ನೆರೆಹೊರೆಯವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ವೀಡಿಯೋವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಜ್ಜಿಯ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾನವೀಯತೆಯನ್ನ ಮರೆತು ವಯೋವೃದ್ದೆ ಮೇಲೆ ಪ್ರತಾಪ ತೋರಿದ ಲಕ್ಷ್ಮೀದೇವಮ್ಮ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.