ಚಿಕ್ಕಬಳ್ಳಾಪುರ | ಸಾಕಷ್ಟು ಕುತೂಹಲ ಮೂಡಿಸಿದ ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಕ್ಷೇತ್ರದ (Lok Sabha Constituency) ಕಾಂಗ್ರೆಸ್ ಟಿಕೆಟ್ (Congress ticket) ಇದೀಗ ಘೋಷಣೆಯಾಗಿದ್ದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ (Veerappa Moily) ಭಾರಿ ಮುಖಭಂಗವಾಗಿದೆ.
Zika virus | ಚಿಕ್ಕಬಳ್ಳಾಪುರದಲ್ಲಿ ಕಾಣಿಸಿಕೊಂಡ ಮಾರಣಾಂತಿಕ ಜೀಕಾ ವೈರಸ್ – karnataka360.in
ಹೌದು,, ಪಕ್ಷ ನಿಷ್ಠೆ ಮತ್ತು ಅನುಭವದ ಆಧಾರದ ಮೇಲೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೇಳಿದ್ದ ಮಾಜಿ ಸಿಎಂ ವೀರಪ್ಪಮೊಯ್ಲಿಯವರಿಗೆ ಹಿನ್ನಡೆಯಾಗಿದ್ದು, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ ಎಸ್ ರಕ್ಷಾ ರಾಮಯ್ಯ (Raksha Ramaiah) ಅವರಿಗೆ ಪಕ್ಷದ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ.
ರಕ್ಷಾ ರಾಮಯ್ಯ ಸ್ಥಳೀಯರಲ್ಲ, ಚಿಕ್ಕಬಳ್ಳಾಪುರಕ್ಕೆ ಅವರ ಕೊಡುಗೆ ಏನು..? ಅವರಿಗೆ ಟಿಕೆಟ್ ನೀಡಿದರೆ ನಾವು ಸಪೋರ್ಟ್ ಮಾಡಲ್ಲ ಹೀಗೆ ಹಲವಾರು ರೀತಿಯಲ್ಲಿ ರಕ್ಷಾ ರಾಮಯ್ಯ ಅವರಿಗೆ ವೀರಪ್ಪ ಮೊಯ್ಲಿ ಬೆಂಬಲಿಗರಿಂದ ವಿರೋಧ ವ್ಯಕ್ತವಾಗಿತ್ತು. ಇದೀಗ ಅಂತಿಮವಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು ವೀರಪ್ಪ ಮೊಯ್ಲಿ ಅವರ ಮುಂದಿನ ನಡೆ ಏನು ಎನ್ನುವುದು ಕುತೂಹಲ ಮೂಡಿಸಿದೆ.