Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!

ತುಮಕೂರು | ತಿಪಟೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಒಂದು ವಿಶೇಷ ಕುರಿ (Chand Symbol Sheep) ಬಗ್ಗೆ ಕುತೂಹಲಕರ ಮಾಹಿತಿ ಬಹಿರಂಗವಾಯಿತು. ಕೋಲಾರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕುರುಬೂರು ಗ್ರಾಮದ ರಾಘವೇಂದ್ರ ಎಂಬ ಪಶುವೈದ್ಯರು ಡಾರ್ಪರ್ ಎಂಬ ವಿದೇಶಿ ತಳಿಯ ಕುರಿಮರಿಯನ್ನು (Chand Symbol Sheep) ನಾಲ್ಕು ವರ್ಷಗಳ ಹಿಂದೆ 80,000 ರೂ ಖರೀದಿಸಿದ್ದರು.

ಇದನ್ನು ಓದಿ : Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ

ಆ ಮರಿ ಕೇವಲ ಒಂದು ವರ್ಷದಲ್ಲಿ 95 ಕೆಜಿಗೂ ಹೆಚ್ಚು ತೂಕ ಬೆಳೆದಿತ್ತು. ನಂತರ ಆ ಕುರಿಯನ್ನು ಬಳಸಿಕೊಂಡು ಸ್ಥಳೀಯ ನಾಟಿ ಕುರಿಗಳ ಜೊತೆ ಕ್ರಾಸ್‌ ಬ್ರೀಡ್ ಮಾಡಿ, 20 ಕುರಿ ಮರಿ ಹುಟ್ಟಿಸಿದ್ದಾರೆ. ಅದರಲ್ಲಿ ವಿಶೇಷವಾದ ಒಂದು ಕುರಿಯು ಎಲ್ಲರ ಗಮನ ಸೆಳೆದಿದೆ.

ಕಪ್ಪು ಕುರಿಯ ಕುತ್ತಿಗೆ ಮೇಲಿದೆ (Chand Symbol Sheep) ಚಂದ್ರನ ಆಕೃತಿ

ಈ ಕುರಿ ಕಪ್ಪು ಬಣ್ಣದ ಗುರಿ, ಆದರೆ ಅದರ ತಲೆ ಮತ್ತು ಕುತ್ತಿಗೆ ನಡುವೆ ಬಿಳಿಯ ಬಣ್ಣದ “ಚಂದ್ರನ ಆಕೃತಿ” ಇದೆ. ಈ ವಿಶಿಷ್ಟ ಲಕ್ಷಣವೇ ಇದನ್ನು ಅಪರೂಪದ ಕುರಿಯಾಗಿ ಮಾಡಿದೆ. ಈಗ ಈ ಕುರಿಗೆ ಕೇವಲ 7 ತಿಂಗಳಾಗಿದ್ದರೂ, ತೂಕ ಈಗಾಗಲೇ 68 ಕೆಜಿ ಆಗಿದೆ.

ಈ ಕುರಿಗೆ ವಿಶೇಷವಾಗಿ 3 ತಿಂಗಳಾಗಿದ್ದಾಗಲೇ ಒಬ್ಬ ಮುಸ್ಲಿಂ ಖರೀದಿದಾರರು ₹3.50 ಲಕ್ಷ ನೀಡಲು ಮುಂದಾಗಿದ್ದನ್ನು ರಾಘವೇಂದ್ರ ತಿಳಿಸಿದ್ದಾರೆ. ಹೀಗಾಗಿ, ಈ ಕುರಿಯ ಸಂತತಿಯನ್ನು ಅಭಿವೃದ್ಧಿಪಡಿಸಲು ಆಸಕ್ತರು ಅಥವಾ ಚಂದ್ರನ ಆಕೃತಿಯ ಕುರಿಗಳನ್ನು ಇಷ್ಟಪಡುವವರು ಕೊಂಡುಕೊಳ್ಳಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಲಾಯಿತು.

Leave a Reply

Your email address will not be published. Required fields are marked *