Wednesday, January 8, 2025
Homeಜಿಲ್ಲೆಬೆಳಗಾವಿC T Ravi arrest | ಸಿ ಟಿ ರವಿ ಬೆಂಬಲಕ್ಕೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ...

C T Ravi arrest | ಸಿ ಟಿ ರವಿ ಬೆಂಬಲಕ್ಕೆ ನಿಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದೇನು..?

ಬೆಳಗಾವಿ | ಒಟ್ಟಾರೆ ಪ್ರಕರಣದಲ್ಲಿ ಸಿಟಿ ರವಿ ಹೇಳಿದ್ದು ಒಂದು ಭಾಗ. ಅದರ ಬಗ್ಗೆ ಸಭಾಪತಿ ಹೇಳಿಕೆ ಗಮನಿಸಬೇಕಾಗುತ್ತದೆ. ಸುವರ್ಣ ಸೌಧಕ್ಕೆ ನುಗ್ಗಿ ಗೂಂಡಾ ವರ್ತನೆ ಮಾಡಿದ್ದಾರೆ. ಬಳಿಕ ಸಿಟಿ ರವಿ (C T Ravi arrest) ಅವರನ್ನು ಹೊತ್ತಾಕ್ಕೊಂಡು ಹೋಗಿದ್ದಾರೆ. ಅವರು ಸಾಮಾನ್ಯ ವ್ಯಕ್ತಿ ಅಲ್ಲ ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಒಂದಿಷ್ಟು ಗೌರವ ಬೇಡವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆಗೆ ಹೊತ್ತಕೊಂಡು ಹೋಗಿ ರಾತ್ರಿಯಲ್ಲ ಖಾನಾಪುರ, ರಾಮದುರ್ಗ ಅಲೆದಾಡಿಸಿದ್ದಾರೆ. ಒಂದು ರೀತಿಯಲ್ಲಿ ಟೆರರಿಸ್ಟ್ ಹೊತ್ತುಕೊಂಡು ಹೋಗುವ ಭಾವನೆಯಲ್ಲಿ, ಸರಕಾರದ ಕುಮ್ಮಕ್ಕಿನಿಂದ ಆ ರೀತಿ ವರ್ತನೆ ನಡೆದಿದೆ ಇದು ಖಂಡನಾರ್ಹ. ಸುಮಾರು 500 ಕಿಮೀ. ಜೀಪ್ ಅಲ್ಲಿ ಎತ್ತಾಕೊಂಡ ಹೋಗಿ ಸುತ್ತು ಹೊಡಿಸಿದ್ದಾರೆ. ಏನು ಮಾಡೋದಕ್ಕೆ ಹೊರಟಿದ್ದಾರೆ ಇವರು. ಒಬ್ಬ ಪ್ರತಿನಿಧಿಯನ್ನು ನಡೆಸುಕ್ಕೊಳ್ಳುವ ರೀತಿನಾ ಇದು..? ಎಂದು ಪ್ರಶ್ನೆ ಮಾಡಿದ್ದಾರೆ.

ಪೊಲೀಸರ ಮೇಲೆ ದಬ್ಬಾಳಿಕೆ, ಒತ್ತಾಯ ಮಾಡಿ ದೌರ್ಜನ್ಯ ನಡೆಸುತ್ತಿದ್ದಾರೆ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ಆಯೋಜನೆ ಮಾಡಿದ್ದೇವೆ. ಹಿಂದೆಂದೂ ಕೂಡ ರಾಜ್ಯದಲ್ಲಿ ಇಂತಹ ಘಟನೆ ನಡೆದಿಲ್ಲ. ಇಡೀ ದೇಶದಲ್ಲಿ ಕೂಡ ಈ ರೀತಿ ಆಗಿರಲು ಸಾಧ್ಯವಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ನಾಲ್ಕೈದು ಪೊಲೀಸ್ ಸ್ಟೇಷನ್ ಕರೆದುಕೊಂಡು ಹೋಗಿ ಅಲ್ಲಿ ಕೂರಿಸಿದ್ದಾರೆ. ವಿರೋಧ ಪಕ್ಷದ ನಾಯಕರನ್ನು ಒಳಗೆ ಬಿಟ್ಟಿಲ್ಲ. ವಕೀಲರನ್ನು ಒಳಗೆ ಬಿಟ್ಟಿಲ್ಲ. ಸಿಟಿ ರವಿ ಕಂಪ್ಲೇಟ್ ಕೂಡ ರೆಸಿಸ್ಟರ್ ಮಾಡಿಕೊಂಡಿಲ್ಲ. ಇಡೀ ರಾತ್ರಿ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಸಿಟಿ ರವಿ ತಲೆಗೆ ಪೆಟ್ಟು ಬಿದ್ದಿದೆ ಆಸ್ಪತ್ರೆಗೂ ಕೂಡ ಕರೆದುಕೊಂಡು ಹೋಗಿಲ್ಲ. ಅತಿರೇಕದ ವರ್ತನೆ ಸರ್ಕಾರದ ಕುಮ್ಮಕ್ಕಿನಿಂದ ನಡೆದಿದೆ ಎಂದು ಕಿಡಿ ಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments