ತುಮಕೂರು | ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸಿ ಎಸ್ ಪುರದಲ್ಲಿರುವ ಸರ್ಕಾರಿ ಶಾಲೆ (C.S. Pura Government School) ಇದೀಗ ನೂರು ವರ್ಷಗಳನ್ನು ಪೂರೈಸಿದ್ದು, ಹಳೆಯ ವಿದ್ಯಾರ್ಥಿಗಳು ಈ ವೇಳೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ.
ಹೌದು,, ಕೆ ಪಿ ಎಸ್ ಶಾಲೆ ಎಚ್ ಪಿ ಎಸ್ ವಿಭಾಗ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ 100ನೇ ವರ್ಷದ ಶತಮಾನೋತ್ಸವ ಕಾರ್ಯಕ್ರಮ ಮತ್ತು ಗುರುವಂದನಾ ಸಮಾರಂಭ ಹಾಗೂ ಹಳೆ ವಿದ್ಯಾರ್ಥಿಗಳ ಸಮಾಗಮ ಶಾಲಾ ಮಕ್ಕಳಿಂದ ಕಲಾ ಸಂಭ್ರಮದ ಕಾರ್ಯಕ್ರಮವನ್ನು ಫೆಬ್ರವರಿ 7 2025ನೇ ಶುಕ್ರವಾರ ಶಾಲೆಯ ಆವರಣದಲ್ಲಿ ಆಯೋಜನೆ ಮಾಡಲಾಗಿದೆ.
ಇದನ್ನು ಓದಿ : Sri Mahalakshmi New Temple | ಇಂದಿನಿಂದ ಭಕ್ತರಿಗೆ ತೆರೆಯಲಿದೆ ಮಲ್ಲಸಂದ್ರ ಶ್ರೀ ಮಹಾಲಕ್ಷ್ಮಿ ನೂತನ ದೇವಾಲಯ
ನೂರು ವರ್ಷಗಳು ಪೂರೈಸಿರುವ ಈ ಸರ್ಕಾರಿ ಶಾಲೆಯಲ್ಲಿ (C.S. Pura Government School) ಅನೇಕ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು, ಅದರಲ್ಲಿ ಸಾಕಷ್ಟು ಜನ ಶಿಕ್ಷಕರಾಗಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರಾಗಿದ್ದಾರೆ, ವಕೀಲರಾಗಿದ್ದಾರೆ, ಇಂಜಿನಿಯರ್ ಗಳಾಗಿ ಕೂಡ ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲದೇ ರಾಜಕಾರಣದಲ್ಲೂ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಂತಹವರದರಲ್ಲಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ ಕೆ ರಾಮಮೂರ್ತಿಯವರು ಕೂಡ ಒಬ್ಬರಾಗಿದ್ದಾರೆ.
ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ, ರಾಜ್ಯ ರೈಲ್ವೆ ಮತ್ತು ಜಲ ಶಕ್ತಿ ಖಾತೆ ಸಚಿವರಾದ ವಿ. ಸೋಮಣ್ಣ, ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಟಿ ಕೃಷ್ಣಪ್ಪ, ಗುಬ್ಬಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಸ್ ಆರ್ ಶ್ರೀನಿವಾಸ್, ಮಾಜಿ ಶಾಸಕರಾದ ಮಸಾಲ ಜಯರಾಮ್, ಕಾಂಗ್ರೆಸ್ ಮುಖಂಡರಾದ ಬೆಮೆಲ್ ಕಾಂತರಾಜು, ಜೆಡಿಎಸ್ ಮುಖಂಡರಾದ ನಾಗರಾಜು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣಗೌಡ ಅವರಿಗೆ ವಿಶೇಷ ಆಹ್ವಾನ ನೀಡಲಾಗಿದೆ.
![](https://i0.wp.com/karnataka360.in/wp-content/uploads/2025/02/WhatsApp-Image-2025-02-03-at-3.33.59-PM-1-1024x681.jpeg?resize=696%2C463&ssl=1)
ಇನ್ನು ಸಿ ಎಸ್ ಪುರ ಈ ಶಾಲೆಯಲ್ಲಿ (C.S. Pura Government School) ವಿದ್ಯಾಭ್ಯಾಸ ಮಾಡಿರುವಂತಹ ಹಳೆಯ ವಿದ್ಯಾರ್ಥಿಗಳಿಗೆ ಆಮಂತ್ರಣ ತಲುಪದೇ ಇದ್ದರೆ, ಇದನ್ನೇ ಆಮಂತ್ರಣವನ್ನಾಗಿ ಪರಿಗಣಿಸಿ ಎಲ್ಲರೂ ಕೂಡ ಭಾಗವಹಿಸಬೇಕು ಎಂದು ಕೆಪಿಎಸ್ ಶಾಲೆ ಎಚ್ ಪಿ ಎಸ್ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಶಾಲೆಯ ಪ್ರಸ್ತುತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.