ಕೃಷಿ ಮಾಹಿತಿ | ನೀವು ಅನೇಕ ವಿಧದ ಅಂತ್ಯಕ್ರಿಯೆಗಳ (funeral) ಬಗ್ಗೆ ಕೇಳಿರಬಹುದು. ಆದರೆ ನಾವು ಇಂದು ಹೇಳುವ ಅಂತ್ಯಕ್ರಿಯೆಯ (funeral) ಬಗ್ಗೆ ಅನೇಕ ಜನರು ಸರಿ ಎನ್ನಬಹುದು ಮತ್ತು ಅನೇಕರು ಅದನ್ನು ವಿರೋಧಿಸಬಹುದು. ಅಂತಹದ್ದೊಂದು ಅಂತ್ಯಕ್ರಿಯೆ (funeral) ಮತ್ತು ತಿಥಿ ಕಾರ್ಯ ಭಾರತದಲ್ಲಿ ನಡೆದಿದೆ.
ಹೌದು,, ಹರಿಯಾಣದ (Haryana) ಚರ್ಕಿ ದಾದ್ರಿಯಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ಎಮ್ಮೆಯ ಅಂತ್ಯ ಸಂಸ್ಕಾರ (Last rites of buffalo) ಮಾಡಲಾಗಿದೆ. ಸುಮಾರು 24 ವರ್ಷಗಳ ಕಾಲ ರೈತ ಕುಟುಂಬದ ಮೂರು ತಲೆಮಾರುಗಳನ್ನು ಶ್ರೀಮಂತರನ್ನಾಗಿ ಮಾಡಿದ ಎಮ್ಮೆ ಸತ್ತ ಮೇಲೆ ಅಂತ್ಯಕ್ರಿಯೆ ನಡೆಸಲಾಗಿದೆ. ಎಮ್ಮೆಯ ಮರಣದ ನಂತರ ಚಿತಾಭಸ್ಮವನ್ನು ನೀರಿಗೆ ಬಿಡುವುದು ಮಾತ್ರವಲ್ಲದೆ 17ನೇ ದಿನದ ತಿಥಿ ಆಚರಣೆಗಳನ್ನು ಸಹ ಮಾಡಲಾಗಿದೆ.
ಈ ಮನೆಯವರು ಎಮ್ಮೆಯನ್ನು ಪ್ರೀತಿಯಿಂದ ಲಾಡ್ಲಿ ಎಂದು ಕರೆಯುತ್ತಿದ್ದರು. ಶವಯಾತ್ರೆ ಮಾತ್ರವಲ್ಲದೆ ಅದರ ತಿಥಿಯ ಔತಣವನ್ನೂ ಆಯೋಜಿಸಿದ್ದಾರೆ. ಇದಕ್ಕಾಗಿ ರೈತ ಕುಟುಂಬದವರು ಸಂಬಂಧಿಕರು ಹಾಗೂ ಗ್ರಾಮಸ್ಥರನ್ನೂ ಕೂಡ ಆಹ್ವಾನಿಸಿದ್ದಾರೆ.
ತಿಥಿಯ ಸಂದರ್ಭದಲ್ಲಿ ದೇಸಿ ತುಪ್ಪದಲ್ಲಿ ತಯಾರಿಸಿದ ರುಚಿಕರವಾದ ಆಹಾರವನ್ನು ಸಹ ಜನರಿಗೆ ನೀಡಲಾಯಿತು. ಈ ಹಬ್ಬದ ನಂತರ ರೈತ ಕುಟುಂಬದ ಎಮ್ಮೆ ಪ್ರೀತಿ ಚರ್ಚೆಗೆ ಗ್ರಾಸವಾಗಿದೆ. ಈ ಔತಣಕೂಟವನ್ನು ಚರ್ಖಿ ಗ್ರಾಮದ ನಿವಾಸಿ ಸುಖಬೀರ್ ಸಿಂಗ್ ಆಯೋಜಿಸಿದ್ದರು. ವಾಸ್ತವವಾಗಿ ಅವರ ತಂದೆ ರಿಸಾಲ್ ಸಿಂಗ್ ಸುಮಾರು 28 ವರ್ಷಗಳ ಹಿಂದೆ ಎಮ್ಮೆಯನ್ನು ತಂದಿದ್ದರು.
ರೈತನ ಮನೆಯಲ್ಲಿದ್ದ ಎಮ್ಮೆ ಸತತ 24 ಬಾರಿ ಕರುವಿಗೆ ಜನ್ಮ ನೀಡುವ ಮೂಲಕ ದಾಖಲೆ ಸೃಷ್ಟಿಸಿದೆ. ಕುಟುಂಬದ ಮೂರು ತಲೆಮಾರುಗಳು ಪ್ರೀತಿಯ ಎಮ್ಮೆಯ ಹಾಲು ಕುಡಿದವು. ಅವರು ಲಾಡ್ಲಿಯನ್ನು ಕುಟುಂಬದ ಸದಸ್ಯರಂತೆ ನಡೆಸಿಕೊಂಡರು ಎಂದು ರೈತ ಸುಖಬೀರ್ ಸಿಂಗ್ ತಿಳಿಸಿದ್ದಾರೆ.
ಅಂತ್ಯಕ್ರಿಯೆಯ ಸಂದರ್ಭದಲ್ಲಿ, ದೇಸಿ ತುಪ್ಪದಲ್ಲಿ ಲಡ್ಡು, ಜಿಲೇಬಿ, ಗುಲಾಬ್-ಜಾಮೂನ್ ಮುಂತಾದ ವಸ್ತುಗಳನ್ನು ತಯಾರಿಸಲಾಗಿತ್ತು. ಈ ಶವ ಸಂಸ್ಕಾರದ ಸಂದರ್ಭದಲ್ಲಿ ಸುಮಾರು 400 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ರೈತ ಹೇಳಿದ್ದಾರೆ.