Thursday, December 12, 2024
Homeಜಿಲ್ಲೆಮೈಸೂರುBoycott funeral | ಬಹಿಷ್ಕಾರದ ಪಿಡುಗು ; ಮಗನ ಅಂತ್ಯಸಂಸ್ಕಾರ ಮಾಡಲಾಗದೆ ತಂದೆ ಪರದಾಟ..!

Boycott funeral | ಬಹಿಷ್ಕಾರದ ಪಿಡುಗು ; ಮಗನ ಅಂತ್ಯಸಂಸ್ಕಾರ ಮಾಡಲಾಗದೆ ತಂದೆ ಪರದಾಟ..!

ಮೈಸೂರು | ಬಹಿಷ್ಕಾರಕ್ಕೆ (Boycott) ಒಳಗಾದ ಕುಟುಂಬದಲ್ಲಿ ಸಾವನ್ನಪ್ಪಿದ ವಿಕಲಾಂಗಚೇತನ ಯುವಕನ ಅಂತ್ಯಸಂಸ್ಕಾರಕ್ಕೆ (funeral) ಪೋಷಕರು ಪರದಾಡಿದ ಅಮಾನವೀಯ ಘಟನೆ ರಾಜ್ಯದ ಮುಖ್ಯಮಂತ್ರಿಯ (Chief Minister) ತವರು ಜಿಲ್ಲೆ ಮೈಸೂರಿನ (Mysore) ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

Mysore Prison | ಕಾರಾಗೃಹಕ್ಕೆ ಕರೆತಂದ ಆರೋಪಿಯ ಚಪ್ಪಲಿಯಲ್ಲಿತ್ತು ಆ ವಸ್ತು..? – karnataka360.in

ಯುವಕನ ಅಂತ್ಯಸಂಸ್ಕಾರಕ್ಕೆ ಗ್ರಾಮದಲ್ಲಿ ಅವಕಾಶ ನೀಡದ ಹಿನ್ನಲೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಮೃತದೇಹಕ್ಕೆ ಮುಕ್ತಿ ದೊರಕಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೌಖಿಕ ಆದೇಶಕ್ಕೆ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಹಾಗೂ ಕಂದಾಯ ನಿರೀಕ್ಷಕ ಪ್ರಕಾಶ್ ಗ್ರಾಮಕ್ಕೆ ಭೇಟಿ ನೀಡಿ ಮುಖಂಡರ ಮನ ಹೊಲಿಸಿ ನಂತರ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಹುಲ್ಲಹಳ್ಳಿ ಸಮೀಪ ಇರುವ ತರಗನಹಳ್ಳಿಯ ನಿವಾಸಿ ಕುಳ್ಳನಾಯಕನ ಕುಟುಂಬದ ಮೇಲೆ ನಾಲ್ಕು ವರ್ಷಗಳ ಹಿಂದೆ ಮುಖಂಡರು ಬಹಿಷ್ಕಾರ ಹೇರಿದ್ದರು. ಬಹಿಷ್ಕಾರವನ್ನು ತೆರುವುಗೊಳಿಸಲು ಕುಳ್ಳನಾಯಕ ಹುಲ್ಲಹಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಕಛೇರಿಗೆ ಸಾಕಷ್ಟು ಅಲೆದಾಡಿದ್ದ. ತಾಲ್ಲೂಕು ಆಡಳಿತ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ನೆನ್ನೆ ಕುಳ್ಳನಾಯಕನ ಮಗ 15 ವರ್ಷದ ಮಾದೇಶ ಮೃತಪಟ್ಟಿದ್ದಾನೆ.

ಅಂತ್ಯಸಂಸ್ಕಾರ ಮಾಡಲು ಗ್ರಾಮದಲ್ಲಿ ಅವಕಾಶ ನೀಡಿಲ್ಲ ಹಾಗೂ ಯಾರೂ ಸಹ ಮುಂದೆ ಬಂದಿಲ್ಲ. ಇದರಿಂದ ನೊಂದ ಕುಳ್ಳನಾಯಕ ಮಗನ ಮೃತದೇಹವನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಕೊಂಡೊಯ್ಯಲು ಮುಂದಾಗಿದ್ದಾನೆ. ಈ ಮಾಹಿತಿ ಅರಿತ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು, ಕುಳ್ಳನಾಯಕನ ಪರಿಸ್ಥಿತಿ ಅರಿತು ಕೂಡಲೇ ತಹಶೀಲ್ದಾರ್ ಗೆ ಸೂಚನೆ ನೀಡಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಎಚ್ಚೆತ್ತ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮತ್ತು ಆರ್ ಐ ಪ್ರಕಾಶ್ ರವರು ಗ್ರಾಮದ ಮುಖಂಡರ ಮನ ಹೊಲಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದ್ದಾರೆ. 21 ನೇ ಶತಮಾನಕ್ಕೆ ಕಾಲಿಟ್ಟರೂ ಬಹಿಷ್ಕಾರದ ಪಿಡುಗಿನಿಂದ ಹೊರಬರಲು ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶದಿಂದ ಸಧ್ಯ ಅಂತ್ಯಕ್ರಿಯೆ ನಡೆಸಲಾಗಿದ್ದು ಮೃತದೇಹಕ್ಕೆ ಮುಕ್ತಿ ನೀಡಿದಂತಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments