ಬೆಂಗಳೂರು | ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ಬಿಜೆಪಿ (BJP) ಪಕ್ಷ ಲೋಕಸಭೆ ಟಿಕೆಟ್ (lok sabha ticket) ಹಂಚಿಕೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು ಸುಮಾರು 12 ಮಂದಿ ಹಾಲಿ ಲೋಕಸಭಾ ಸಂಸದರಿಗೆ (Loksabha member) ಬಿಜೆಪಿಯ ಟಿಕೆಟ್ ಮಿಸ್ ಆಗಿದೆ.
ಹೌದು,, ಕೆಲವು ಕ್ಷೇತ್ರಗಳಲ್ಲಿ ಉತ್ತಮ ಕೆಲಸ ಮಾಡಿದ್ದರು ಕಾರಣಾಂತರಗಳಿಂದ ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿ ಮತ್ತೊಬ್ಬ ಅಭ್ಯರ್ಥಿಗೆ ನೀಡಲಾಗಿದೆ. ಕೆಲವು ಕಡೆಗಳಲ್ಲಿ ಸರಿಯಾಗಿ ಕೆಲಸ ಮಾಡದೆ ಮತದಾರರಿಗೂ ಸಿಗದೆ ಪಕ್ಷಕ್ಕೆ ಮುಜುಗರ ತರುವಂತಹ ಹೇಳಿಕೆಯನ್ನು ನೀಡಿದ ಹಲವು ಮಂದಿಗೆ ಟಿಕೆಟ್ ಕೈತಪ್ಪಿದ್ದು, ಉಳಿದಂತೆ ಕೆಲವರು ತಾವೇ ಸ್ವತಹ ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಇನ್ನು ಕರ್ನಾಟಕ ರಾಜ್ಯದ 25 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಸಿದೆ. ಈ ಪೈಕಿ 12 ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅನಂತ್ ಕುಮಾರ್ ಹೆಗಡೆ, ಪ್ರತಾಪ್ ಸಿಂಹ, ನಳೀನ್ ಕುಮಾರ್ ಕಟೀಲ್, ಮಂಗಳಾ ಅಂಗಡಿ, ನಾರಾಯಣ ಸ್ವಾಮಿ, ಕರಡಿ ಸಂಗಣ್ಣ, ಸದಾನಂದ ಗೌಡ ಹಾಗೂ ದೇವೆಂದ್ರಪ್ಪಗೆ ಟಿಕೆಟ್ ಮಿಸ್ ಆಗಿದೆ. ಹಾಗೇ, ಬಚ್ಚೇಗೌಡ, ಜಿ,ಎಸ್. ಬಸವರಾಜ್, ಶ್ರೀನಿವಾಸ್ ಪ್ರಸಾದ್ ಹಾಗೂ ಶಿವಕುಮಾರ್ ಉದಾಸಿ ಅವರು ಅಭ್ಯರ್ಥಿ ಘೋಷಣೆಗೂ ಮುನ್ನವೇ ಚುನಾವಣೆಯಿಂದ ಹಿಂದೆ ಸರಿದಿದ್ದರು.