ತುಮಕೂರು | ಕಾಂಗ್ರೆಸ್ ಪಕ್ಷದ ಕಟ್ಟಾಳು, ಕೆಪಿಸಿಸಿ ವಕ್ತಾರರು ಹಾಗೂ ಪ್ರಧಾನ ಕಾರ್ಯದರ್ಶಿ, ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ವಕೀಲರಾದ ಟಿ ಎಸ್ ನಿರಂಜನ್ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ.
ಹೌದು,, ಕಳೆದ ಹತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಪಕ್ಷದ ನೀತಿ ನಿಲುವುಗಳನ್ನು ಸಮರ್ಥವಾಗಿ ಮಾಧ್ಯಮಗಳಲ್ಲೂ ಕೂಡ ಬಿಂಬಿಸಿದ್ದರು. ತುಮಕೂರು ಜಿಲ್ಲೆಯಲ್ಲೂ ಕೂಡ ತನ್ನ ಶಕ್ತಿ ಮೀರಿ ಪಕ್ಷದ ಪರವಾಗಿ ಇಲ್ಲಿಯವರೆಗೂ ನಡೆದ ಚುನಾವಣೆಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಕೆಲಸ ಮಾಡಿದ್ದರು.
ಆದರೆ ಇತ್ತೀಚಿನ ಕೆಲವು ಪಕ್ಷಗಳ ಬೆಳವಣಿಗೆಗಳಿಂದ ನನ್ನಂತಹ ನೂರಾರು ಕಾರ್ಯಕರ್ತರಿಗೆ ಪಕ್ಷದ ಪರ ಇರುವ ಜನಸಾಮಾನ್ಯರಿಗೆ ನಿರಾಸೆ ಉಂಟಾಗಿದೆ. ಈ ಎಲ್ಲಾ ಕಾರಣಗಳಿಂದ ತಾನು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನಿರಂಜನ್ ತಿಳಿಸಿದ್ದಾರೆ.
ಇನ್ನೂ ಪಕ್ಷವನ್ನು ಬಿಡುತ್ತಿರುವುದಕ್ಕೆ ಪ್ರಬಲವಾದ ಕಾರಣವೇನು..? ಮುಂದಿನ ದಿನಗಳಲ್ಲಿ ಯಾವ ರಾಜಕೀಯ ಪಕ್ಷವನ್ನು ಸೇರಲಿದ್ದಾರೆ ಎಂಬುವುದರ ಬಗ್ಗೆ ಮಾತ್ರ ಇನ್ನು ಮಾಹಿತಿ ನೀಡಿಲ್ಲ.
ಒಟ್ಟಾರೆಯಾಗಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದ ಕೆಲವರು ಅದೇ ಪಕ್ಷದಲ್ಲಿನ ಕೆಲವು ಆಂತರಿಕ ಭಿನ್ನಾಭಿಪ್ರಾಯಗಳಿಗೆ ಬೇಸತ್ತು, ಮತ್ತೊಂದು ಪಕ್ಷದ ಕಡೆ ಮುಖ ಮಾಡುವುದು ಸಾಮಾನ್ಯವಾಗಿದೆ. ಇನ್ನು ಮುಂದೆ ಇದು ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಅನ್ನೋದನ್ನ ಕಾದು ನೋಡಬೇಕು.