ಬೆಳಗಾವಿ | ಬೆಳಗಾವಿ (Belgaum) ಜಿಲ್ಲೆಯನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿ ಎಂಬ ಆದಿತ್ಯ ಠಾಕ್ರೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಅವರು ಬೆಳಗಾವಿ ಬಗ್ಗೆ ಹುಚ್ಚು ಹುಚ್ಚಾಗಿ ಮಾತಾಡಿದ್ದಾರೆ. ಮೊನ್ನೆ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಶಿವಸೇನೆ ಹೆಸರು ಹೇಳುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ ಗೆ ಬಂದಿದ್ದಾರೆ. ಈಗ ಅವರ ಸೋಲಿಗೆ ಬೆಳಗಾವಿ ಬಗ್ಗೆ ಮಾತಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸೋಲಿಗೆ ಕಂಗೆಟ್ಟು ಈ ರೀತಿ ಮಾತಾಡುತ್ತಿದ್ದಾರೆ ನಾಚಿಕೆ ಆಗಬೇಕು. ಸೋಲಿನ ಮುಂಚಿತವಾಗಿ ಹೇಳಬೇಕಿತ್ತು. ಬೆಳಗಾವಿ ನಮ್ಮ ಅವಿಭಾಜ್ಯ ಅಂಗ. ಈ ಹಿನ್ನಲೆ ಅವರ ಹುಚ್ಚ ಹುಚ್ಚ ಮಾತಿಗೆ ಬೆಲೆ ಕೊಡಬೇಕಿಲ್ಲಾ ಎಂದು ಹೇಳಿದ್ದಾರೆ.