Wednesday, February 5, 2025
Homeಜಿಲ್ಲೆಬೆಳಗಾವಿBasanagowda Patil Yatnal | ಜಮೀರ್ ಭೇಟಿಯಾಗಿದ್ದು ಬಿರಿಯಾನಿ ತಿನ್ನೋಕೆ ಅಲ್ಲ – ಯತ್ನಾಳ್

Basanagowda Patil Yatnal | ಜಮೀರ್ ಭೇಟಿಯಾಗಿದ್ದು ಬಿರಿಯಾನಿ ತಿನ್ನೋಕೆ ಅಲ್ಲ – ಯತ್ನಾಳ್

ಬೆಳಗಾವಿ | ಮತ್ತೊಮ್ಮೆ ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ ಮಾಜಿ ಸಚಿವ ಬಸನಗೌಡ ಪಾಟೀಲ್  ಯತ್ನಾಳ್ (Basanagowda Patil Yatnal). ಎದುರಿಗೆ ನಮಸ್ಕಾರ ಮಾಡ್ತಾರೆ ಒಳಗೊಳಗೆ ಏನು ಮಾಡ್ತಾರೆ ಯಾರಿಗೆ ಗೊತ್ತಾಗುತ್ತದೆ. ಊಟಕ್ಕೆ ಕರೆದಿದ್ರು ಹೋಗೊದು ಬಿಡೋದು ನನ್ನ ವಯಕ್ತಿಕ ವಿಚಾರ. ಯಾರ್ಯಾರು ಏನೇನು ಮಾಡ್ತಾರೆ ಯಾರಿಗೆ ಗೊತ್ತು ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಎರಡನೇ ಹಂತದ ಹೋರಾಟಕ್ಕೆ ಸಜ್ಹಾಗಿದ್ದೇವೆ. ಬಳ್ಳಾರಿ ಮತ್ತು ವಿಜಯನಗರದಿಂದ ಹೋರಾಟ ಪ್ರಾರಂಭ ಮಾಡ್ತೇವೆ. ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲರನ್ನೂ ಕರೆಯುತ್ತೇವೆ ಬರೋದು ಬಿಡೋದು ಅವರಿಗೆ ಬಿಟ್ಡಿದ್ದು. ಯಡಿಯೂರಪ್ಪ ಹುಟ್ಟು ಹಬ್ಬದ ಸಮಾವೇಶ ಮಾಡೋದಾದ್ರೇ ಮಾಡಲಿ ಎಂದು ಹೇಳಿದ್ದಾರೆ.

ಜಮೀರ್ ಭೇಟಿ ವಿಚಾರ

ಸರ್ಕಾರ ಕೆಲಸದ ವಿಚಾರದಲ್ಲಿ ಸಚಿವ ಜಮೀರ್ ಅವರನ್ನು ಭೇಟಿಯಾಗಿದ್ದೇನೆ. ಅವರ ಕಚೇರಿಗೆ ಹೋಗಿರೋದು ಮನೆಗಲ್ಲ. ಮನೆಗೆ ಹೋಗಿ ಬಿರ್ಯಾನಿ ತಿಂದು ಬಂದಿಲ್ಲ. ನಮ್ಮ ಕ್ಷೇತ್ರದಲ್ಲಿ ಮನೆಗಳು ನೀಡಿಲ್ಲ ಕೆಲವು ಕಡೆ ಹಿಂದೂಗಳಿಗೆ ಅನ್ಯಾಯವಾಗಿದೆ. ಈ ವಿಚಾರ ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಭೇಟಿಯಾಗಿದ್ದೇವೆ. ಅವರಿಗೆ ನಮಗೆ ಇರೋ ಭಿನ್ನಾಭಿಪ್ರಾಯ ಬೇರೆ ಕ್ಷೇತ್ರದ ವಿಚಾರದ ಹಿನ್ನೆಲೆ ಭೇಟಿಯಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments