Thursday, December 12, 2024
Homeಕ್ರೀಡೆBangladesh-Afghanistan Records in Asia Cup History | ಏಷ್ಯಾ ಕಪ್ ಇತಿಹಾಸದಲ್ಲಿ ಬಲಿಷ್ಠ ತಂಡಗಳನ್ನು...

Bangladesh-Afghanistan Records in Asia Cup History | ಏಷ್ಯಾ ಕಪ್ ಇತಿಹಾಸದಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿದ್ದ ಬಾಂಗ್ಲಾದೇಶ-ಅಫ್ಘಾನಿಸ್ತಾನ ; ಇಲ್ಲಿದೆ ನೋಡಿ ರೋಚಕ ಪಂದ್ಯಗಳ ಹಿಸ್ಟರಿ..!

ಕ್ರೀಡೆ | ಬಾಂಗ್ಲಾದೇಶ (Bangladesh) ಮತ್ತು ಅಫ್ಘಾನಿಸ್ತಾನ (Afghanistan) ಕ್ರಮವಾಗಿ 1986 ಮತ್ತು 2014 ರಿಂದ ಏಷ್ಯಾ ಕಪ್‌ (Asia Cup) ನಲ್ಲಿ ಭಾಗವಹಿಸುತ್ತಿವೆ. ಉಭಯ ತಂಡಗಳು ಏಷ್ಯಾಕಪ್ (Asia Cup)  ಗೆಲ್ಲಲು ಸಾಧ್ಯವಾಗದಿದ್ದರೂ ಈ ಟೂರ್ನಿಯಲ್ಲಿ ದೊಡ್ಡ ತಂಡಗಳಿಗೆ ಸೋಲಿನ ಶಾಕ್ ನೀಡಿದೆ. ಏಷ್ಯಾಕಪ್‌ನ (Asia Cup)  ಏಕದಿನ ಮಾದರಿಯಲ್ಲಿ ಬಾಂಗ್ಲಾದೇಶ (Bangladesh) ಭಾರತ (India) ಮತ್ತು ಪಾಕಿಸ್ತಾನ (Pakistan) ದಂತಹ ತಂಡಗಳನ್ನು ಸೋಲಿಸಿದೆ. ಅದೇ ರೀತಿಯಾಗಿ, ಅಫ್ಘಾನಿಸ್ತಾನ (Afghanistan)  ತಂಡವು ಬಾಂಗ್ಲಾದೇಶ (Bangladesh) ಮತ್ತು ಶ್ರೀಲಂಕಾ (Srilanka) ವನ್ನು ಸೋಲಿಸಿದೆ. ಈ ಪ್ರಶ್ನೆಯು ನಿಮ್ಮ ಮನಸ್ಸಿನಲ್ಲಿ ಉದ್ಭವಿಸುತ್ತಿರಬೇಕು, ಇದು ಯಾವಾಗ ನಡೆಯಿತು ಎಂದು..?

2012ರ ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶ ಮಿರ್‌ಪುರ ಮೈದಾನದಲ್ಲಿ ಭಾರತವನ್ನು 5 ವಿಕೆಟ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 290 ರನ್ ಗಳ ಟಾರ್ಗೆಟ್ ನೀಡಿತ್ತು. ಇದಕ್ಕುತ್ತರವಾಗಿ ಬಾಂಗ್ಲಾದೇಶ 49.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಅದೇ ರೀತಿಯಾಗಿ, 2018 ರ ಏಷ್ಯಾ ಕಪ್ನಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು ಸೋಲಿಸಿತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ 239 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಬ್ಯಾಟಿಂಗ್ ಗೆ ಬಂದ ಪಾಕಿಸ್ತಾನ ತಂಡ ಗುರಿ ಮುಟ್ಟಲು ವಿಫಲವಾಗಿ 50 ಓವರ್ ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಫ್ಘಾನಿಸ್ತಾನ ತಂಡ ಕೂಡ ಪ್ರಚಂಡ ಸವಾಲು ನೀಡಿತ್ತು

2014ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ಮೊದಲ ಬಾರಿಗೆ ಭಾಗವಹಿಸಿತ್ತು. ಆ ಚೊಚ್ಚಲ ಋತುವಿನಲ್ಲಿಯೇ ಅವರು ಬಾಂಗ್ಲಾದೇಶವನ್ನು ಸೋಲಿಸಿದರು. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 222 ರನ್‌ಗಳಿಗೆ ಕುಸಿದಿತ್ತು. ಇದಾದ ನಂತರ 2018ರ ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನ ಬಾಂಗ್ಲಾದೇಶವನ್ನು ಸೋಲಿಸಿತು. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 256 ರನ್‌ಗಳ ಗುರಿ ನೀಡಿತ್ತು, ಇದಕ್ಕೆ ಉತ್ತರವಾಗಿ ಎದುರಾಳಿ ತಂಡವನ್ನು 119 ರನ್‌ಗಳಿಗೆ ಇಳಿಸಲಾಯಿತು.

ಬಾಂಗ್ಲಾದೇಶ ಏಕದಿನ ಮಾದರಿಯಲ್ಲಿ 2 ಬಾರಿ (2012 ಮತ್ತು 2018) ಏಷ್ಯಾ ಕಪ್‌ನ ಫೈನಲ್‌ನಲ್ಲಿ ಆಡಿದೆ. ಆದರೆ ಅಫ್ಘಾನಿಸ್ತಾನ ತಂಡಕ್ಕೆ ಒಮ್ಮೆಯೂ ಫೈನಲ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಏಷ್ಯಾಕಪ್‌ನ ODI ಮಾದರಿಯಲ್ಲಿ ಬಾಂಗ್ಲಾದೇಶ 43 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಅಫ್ಘಾನಿಸ್ತಾನವು 9 ಪಂದ್ಯಗಳನ್ನು ಆಡಿದೆ, ಅದರಲ್ಲಿ 3 ಪಂದ್ಯಗಳನ್ನು ಗೆದ್ದಿದೆ.

ಏಕದಿನದಲ್ಲಿ ಉಭಯ ತಂಡಗಳ ಪ್ರದರ್ಶನ

ಅಫ್ಘಾನಿಸ್ತಾನ ತಂಡ ಏಕದಿನ ಕ್ರಿಕೆಟ್‌ನಲ್ಲಿ 149 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 73 ಪಂದ್ಯಗಳನ್ನು ಗೆದ್ದಿದೆ. ಅದೇ ರೀತಿಯಾಗಿ ಅವರು 71 ಪಂದ್ಯಗಳಲ್ಲಿ ಸೋಲನ್ನು ಎದುರಿಸಬೇಕಾಯಿತು, ಆದರೆ 1 ಪಂದ್ಯ ಟೈನಲ್ಲಿ ಕೊನೆಗೊಂಡಿತು ಮತ್ತು 4 ಪಂದ್ಯಗಳು ಅನಿರ್ದಿಷ್ಟವಾಗಿ ಉಳಿದಿವೆ. ಬಾಂಗ್ಲಾದೇಶ ತಂಡ ಏಕದಿನ ಕ್ರಿಕೆಟ್‌ನಲ್ಲಿ 415 ಪಂದ್ಯಗಳನ್ನು ಆಡಿದೆ. ಈ ಅವಧಿಯಲ್ಲಿ ಬಾಂಗ್ಲಾದೇಶ 152 ಪಂದ್ಯಗಳನ್ನು ಗೆದ್ದರೆ, 254 ಪಂದ್ಯಗಳಲ್ಲಿ ಸೋಲಿನ ರುಚಿ ನೋಡಬೇಕಾಯಿತು. ಬಾಂಗ್ಲಾದೇಶ ತಂಡದ 9 ಪಂದ್ಯಗಳೂ ರದ್ದಾಗಿವೆ. ಏಷ್ಯಾ ಕಪ್ 2023 ರಲ್ಲಿ, ಈ ಎರಡೂ ತಂಡಗಳು ಶ್ರೀಲಂಕಾ ಜೊತೆಗೆ ಬಿ ಗುಂಪಿನಲ್ಲಿವೆ. ಈ ಗುಂಪಿನ ಅಗ್ರ ಎರಡು ತಂಡಗಳು ಸೂಪರ್-4ಗೆ ಅರ್ಹತೆ ಪಡೆಯಲಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments