ಚಿಕ್ಕಬಳ್ಳಾಪುರ | ಜೆಡಿಎಸ್ ಮುಖಂಡ ಹಾಗೂ ಚಿಂತಾಮಣಿ ನಗರಸಭಾ ಸದಸ್ಯ ಆಗ್ರಹಾರ ಮುರಳಿ ಮೇಲೆ ಮುಸುಕುದಾರಿ ದುಷ್ಕರ್ಮಿಗಳು ಲಾಂಗ್ ಗಳಿಂದ ಮಾರಾಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಚಿಂತಾಮಣಿ ನಗರದ ಗಜಾನನ ವೃತ್ತದಲ್ಲಿ ಶುಕ್ರವಾರ ಸಂಜೆ 6.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಮೂರು ಜನ ಮುಸಕುದಾರಿಗಳು ಏಕಾಏಕಿ ಆಗ್ರಹಾರ ಮುರಳಿರವರ ಮೇಲೆ ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ತಲೆ, ಕೈಗಳಿಗೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಆಗ್ರಹಾರ ಮುರಳಿ ರವರ ಸ್ಥಿತಿ ಗಂಭೀರವಾಗಿದ್ದು ಚಿಂತಾಮಣಿ ಸರ್ಕಾರಿ ಸಾರ್ವಜನಿಕ ಅಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನೂ ಘಟನಾ ಸ್ಥಳದಲ್ಲಿ ಕೆಲ ಕಾಲ ಉದ್ವೀಗ್ನ ಪರಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಚಿಂತಾಮಣಿ ಪೋಲಿಸರು ಬೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ, ಜಿಲ್ಲಾಪೋಲಿಸ್ ವರೀಷ್ಟಾಧಿಕಾರಿ ನಾಗೇಶ್ ರವರು ಚಿಂತಾಮಣಿಯಲ್ಲಿಯೇ ಬೀಡು ಬಿಟ್ಟು, ಬಿಗಿ ಪೋಲಿಸ್ ಬಂದೊಬಸ್ತ ವ್ಯವಸ್ಥೆ ಮಾಡಿ ದಾಳಿಕೋರರ ಪತ್ತೆಗಾಗಿ ಬಲೆ ಬಿಸಿದ್ದಾರೆ.
ರಾಜಕೀಯ ಹಾಗೂ ಹಳೇ ದ್ವೇಷ ಹಿನ್ನಲೇಯಲ್ಲಿ ಆಗ್ರಹಾರ ಮುರಳಿರವರ ಮೇಲೆ ಎರಡನೆ ಬಾರಿಗೆ ಹಲ್ಲೆ ನಡೆದಿರುವುದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ