ಬೆಂಗಳೂರು | ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಹೋರಾಟದ (Asha Workers Protest) ನಾಲ್ಕನೇ ದಿನವಾದ ಇಂದು, ಪ್ರತಿಭಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಈ ಆರು ತಿಂಗಳ ಅವಧಿಯಲ್ಲಿ ಹದಿನಾರು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಎಲ್ಲಾ ಜಿಲ್ಲೆಗಳಲ್ಲಿ ತಾಯಿ-ಶಿಶು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ಅಶಾಗಳ ಸೇವೆಯನ್ನು (Asha Workers Protest) ಕಣ್ಣಾರೆ ಕಂಡಿದ್ದು, ತಾಯಿ-ಶಿಶು ಮರಣ ದರ ರಾಜ್ಯದಲ್ಲಿ ಕಡಿಮೆಯಾಗಲು ಆಶಾ ಕಾರ್ಯಕರ್ತೆಯರು, ಸೌಲಭ್ಯಗಳ ಕೊರೆತೆಯ ನಡುವೆಯೂ ಹಗಲು ರಾತ್ರಿ ಎನ್ನದೇ ದುಡಿದಿರುವುದೇ ಕಾರಣ ಎಂದು ಪ್ರಶಂಸಿದರು.
ಎಲ್ಲರಿಗೂ ಘನತೆಯ ಮತ್ತು ಸ್ವಾಭಿಮಾನದ ಬದುಕನ್ನು ಬದಕಲು ಹಕ್ಕಿದೆ. ಆ ಬದುಕು ಸಿಗುವವರೆಗೂ ಹೋರಾಟವನ್ನು ನಡೆಸಬೇಕು, ಈ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಘೋಷಿಸಿದರು.
ಮಹಿಳೆಯರ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಘೋಷಿಸಿದ ಮುಖ್ಯಮಂತ್ರಿಗಳು, ಆಶಾ ಕಾರ್ಯಕರ್ತೆಯರ (Asha Workers Protest) ಈ ನ್ಯಾಯಯುತ ಬೇಡಿಕೆಗಳನ್ನು ಸಹ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆಶಾ ಕಾರ್ಯಕರ್ತೆಯರಿಗೆ ನೋಟಿಸ್ ನೀಡುತ್ತಿರುವ ಮತ್ತು ಕೆಲಸದಿಂದ ತೆಗೆದು ಹಾಕುವುದಾಗಿ ಅಧಿಕಾರಿಗಳು ಹೇಳುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆಶಾ ಕಾರ್ಯಕರ್ತೆಯರ (Asha Workers Protest) ಸೇವೆ ಅತ್ಯಂತ ಅವಶ್ಯಕವಾಗಿದೆ. ಅಧಿಕಾರಿಗಳು ಆಶಾಗಳಿಗೆ ನೋಟಿಸ್ ನೀಡುವ ಬದಲು ತಮ್ಮ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಿ ಎಂದು ಸೂಚಿಸಿದರು. ನೀವು ಯಾರಿಗೂ ಹೆದರುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.