ರಾಮನಗರ | ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರುವುದರ ಜೊತೆಗೆ ಕಾಂಗ್ರೆಸ್ ನಾಯಕರ ಬಲವನ್ನು ಕುಗ್ಗಿಸಲು ಈ ಬಾರಿ ಬಲಿಷ್ಠ ನಾಯಕರು ಎನಿಸಿಕೊಂಡಿರುವ ಕಾಂಗ್ರೆಸ್ ನಾಯಕರನ್ನು ಸೋಲಿಸಿ ಮನೆಗೆ ಕಳಿಸಲು ಬಿಜೆಪಿ ನಾಯಕರು ತಯಾರಿ ನಡೆಸಿದ್ದಾರೆ.
ಬಿಜೆಪಿ ಮುಖಂಡ ಸಿಟಿ ರವಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದು, ಕಾಂಗ್ರೆಸ್ ನ ಭದ್ರಕೋಟೆಗಳನ್ನು ಒಡೆಯಲು ಎಲ್ಲಾ ತಯಾರಿಯನ್ನು ಕೇಂದ್ರ ನಾಯಕರು ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕ್ಷೇತ್ರಗಳಲ್ಲಿ ಅವರನ್ನು ಮಣಿಸುವುದು ಶತಸಿದ್ಧ ಎನ್ನುವ ಸೂಚನೆ ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಅಮೇಠಿ, ರಾಯ್ ಬರೆಲಿ ಅಂತಹ ಕೋಟೆಗಳನ್ನು ಭೇದಿಸಿದವರಿಗೆ ಕನಕಪುರ ಕ್ಷೇತ್ರ ದೊಡ್ಡ ಸವಾಲು ಅಲ್ಲ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಬಳಿಕ ಮಾತನಾಡಿದ ಅವರು ಮತದಾರರಿಗೆ ಭಯ ಹುಟ್ಟಿಸುವ ಕೆಲಸ ಈ ಬಾರಿ ಅಂತ್ಯವಾಗಲಿದೆ. ಹೊಸ ಬದಲಾವಣೆಗೆ ಕನಕಪುರ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.