Saturday, December 14, 2024
Homeಜಿಲ್ಲೆವಿಜಯಪುರAlmatti Reservoir | ಹೆಚ್ಚಾಗುತ್ತಾ ಆಲಮಟ್ಟಿ ಅಣೆಕಟ್ಟು ಎತ್ತರ..?

Almatti Reservoir | ಹೆಚ್ಚಾಗುತ್ತಾ ಆಲಮಟ್ಟಿ ಅಣೆಕಟ್ಟು ಎತ್ತರ..?

ವಿಜಯಪುರ | ಆಲಮಟ್ಟಿ ಜಲಾಶಯ (Almatti Reservoir) ಎತ್ತರವನ್ನು 524 ಅಡಿಗಳಿಗೆ ಎತ್ತರಿಸಲು ನಾವು ಬದ್ಧವಾಗಿದ್ದೇವೆ. ಇದಕ್ಕಾಗಿ ಅಧಿಸೂಚನೆ ಹೊರಡಿಸಬೇಕಿದೆ. ಅಧಿಸೂಚನೆ ಹೊರಡಿಸುವ ಮುನ್ನ ಇದರ ಕಾಮಗಾರಿ ನಡೆಸಬೇಕೆ ಬೇಡವೆ ಎಂದು ಚರ್ಚೆ ನಡೆಯುತ್ತಿದೆ ಎಂದು ವಿಜಯಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಭೂಸ್ವಾಧೀನ ವಿಚಾರವಾಗಿ ಕೆಲವು ತಾರತಮ್ಯವಿದೆ. ಕೆಲವರು ನ್ಯಾಯಾಲಯದಿಂದ ಬೆಂಗಳೂರಿನ ಬೆಲೆಗಿಂತ ಹೆಚ್ಚು ಮೊತ್ತದ ಪರಿಹಾರವನ್ನು ಪಡೆಯಲು ಆದೇಶ ತೆಗೆದುಕೊಂಡು ಬಂದಿದ್ದಾರೆ. ಇದು ಹೇಗೆ ಸಾಧ್ಯ. ಈ ನ್ಯೂನ್ಯತೆ ಸರಿಪಡಿಸಬೇಕು. ಬೊಮ್ಮಾಯಿ ಅವರ ಸರ್ಕಾರ ರೈತರಿಗೆ ನಿಗದಿಪಡಿಸಿರುವ ದರದ ಬಗ್ಗೆ ನಮಗೆ ತಕರಾರಿಲ್ಲ. ಸೋಮವಾರ ಮುಖ್ಯಮಂತ್ರಿಗಳು ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಧರಣಿನಿರತರು ಬಹಳಷ್ಟು ಬೇಡಿಕೆಗಳನ್ನಿಟ್ಟಿರುವ ಬಗ್ಗೆ ಮಾತನಾಡಿದ ಅವರು, ನೂರು ಬೇಡಿಕೆಗಳನ್ನು ಬೇಕಾದರೂ ಇಡಲಿ. ಕಾನೂನು ಚೌಕಟ್ಟಿನಲ್ಲಿ ಕಾರ್ಯರೂಪಕ್ಕೆ ತರಲು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕ್ರಮ ಕೈಗೊಳ್ಳುತ್ತೇವೆ. ಆಲಮಟ್ಟಿ ಅಣೆಕಟ್ಟು ಎತ್ತರ 524 ಅಡಿಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಬೇಕು. ಅದನ್ನು ಮಾಡುವಷ್ಟರಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತೇವೆ. ಕೇಂದ್ರ ಸರ್ಕಾರ 6 ಸಾವಿರ ಕೋಟಿ ಅನುದಾನ ನೀಡಬೇಕಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments