Wednesday, February 5, 2025
Homeಜಿಲ್ಲೆಬೆಂಗಳೂರು ಗ್ರಾಮಾಂತರAgnibanniraya Swamy Temple | ಕರ್ನಾಟಕದ ಪ್ರಥಮ ಅಗ್ನಿಬನ್ನಿರಾಯ ಸ್ವಾಮಿ ದೇವಾಲಯ ಲೋಕಾರ್ಪಣೆಗೆ ಕ್ಷಣಗಣನೆ

Agnibanniraya Swamy Temple | ಕರ್ನಾಟಕದ ಪ್ರಥಮ ಅಗ್ನಿಬನ್ನಿರಾಯ ಸ್ವಾಮಿ ದೇವಾಲಯ ಲೋಕಾರ್ಪಣೆಗೆ ಕ್ಷಣಗಣನೆ

ಬೆಂಗಳೂರು | ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ಸಮಾಜ ಅಂದ್ರೆ ಅದು ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯ. ಇದೀಗ ಈ ಸಮಾಜದ ಮೂಲಪುರುಷರಾಗಿರುವ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ದೇವಾಲಯವನ್ನು (Agnibanniraya Swamy Temple) ಪ್ರಪ್ರಥಮವಾಗಿ ನಿರ್ಮಾಣ ಮಾಡಲಾಗಿದ್ದು ಲೋಕಾರ್ಪಣೆಗೆ ಸಿದ್ಧಗೊಂಡಿದೆ.

ಇದನ್ನು ಓದಿ : Millet Purchasing Center | ತುಮಕೂರು ರಾಗಿ ಖರೀದಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ

ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಮೂಲಪುರುಷರಾದ ಅಗ್ನಿಬನ್ನಿರಾಯ ಸ್ವಾಮಿಯನ್ನು ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ವಿಧಿ ವಿಧಾನಗಳ ಮೂಲಕ ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಮಾರ್ಚ್ 28ನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿದ್ದು ಅಗ್ನಿಬನ್ನಿರಾಯ ಸ್ವಾಮಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಸಮುದಾಯದ ಒಗ್ಗೂಡುವಿಕೆಯ ಹಿನ್ನಲೆಯಲ್ಲಿ ಇಂದು ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.

ಅಗ್ನಿ ಬನ್ನಿರಾಯ ಸ್ವಾಮಿ ದೇಗುಲಕ್ಕೆ (Agnibanniraya Swamy Temple) ಭೂಮಿ ದಾನ

ಬೆಂಗಳೂರು ಉತ್ತರ ತಾಲೂಕು, ದಾಸನಪುರ ಹೋಬಳಿ, ಗಿರಿಯಪ್ಪನ ಪಾಳ್ಯ ಹುಲ್ಲೇಗೌಡನಹಳ್ಳಿಯಲ್ಲಿ   ಶ್ರೀಮತಿ ಶಾಂತಮ್ಮನವರ ಮುಖೇನ ಗಿರಿಯಪ್ಪನವರ ವಂಶಸ್ಥರು ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಸೇವಾ ಟ್ರಸ್ಟ್ ಗೆ ಐದುವರೆಕುಂಟೆ ಜಾಗವನ್ನು ದಾನವಾಗಿ ನೀಡಿದರು. ಸಮಾಜದ ಮುಖಂಡರು, ಯಜಮಾನರುಗಳು, ಕುಲಬಾಂಧವರ ಸಹಕಾರದಿಂದ ಸುಮಾರು 40 ರಿಂದ 45 ಲಕ್ಷ ವೆಚ್ಚದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ದೇವಾಲಯವನ್ನು (Agnibanniraya Swamy Temple) ಇದೀಗ ನಿರ್ಮಾಣ ಮಾಡಲಾಗಿದೆ.

ಶ್ರೀ ಅಗ್ನಿಬನ್ನಿರಾಯ ಸ್ವಾಮಿ ದೇಗುಲದಲ್ಲಿ (Agnibanniraya Swamy Temple) ಎರಡು ದಿನ ವಿಶೇಷ ಕಾರ್ಯಕ್ರಮ

ಸಮಾಜದ ಮುಖಂಡರು, ರಾಜಕೀಯ ಮುಖಂಡರು, ಯಜಮಾನರುಗಳು, ಕುಲಬಾಂಧವರ ನೆರವಿನಿಂದ ಇಂದು ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದ ಮೂಲಪುರುಷರಾದ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ದೇಗುಲ (Agnibanniraya Swamy Temple) ನಿರ್ಮಾಣವಾಗಿದೆ. ಇದೇ ಫೆಬ್ರವರಿ 9 2025 ನೇ ಭಾನುವಾರ ಮತ್ತು 10 ಸೋಮವಾರ ಎರಡು ದಿನಗಳ ಕಾಲ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಸ್ಥಿರ ಬಿಂಬ ಪ್ರಾಣ ಪ್ರತಿಷ್ಠಾಪನ ಮತ್ತು ವಿಮಾನ ಗೋಪುರದ ಕಳಸ ಪ್ರತಿಷ್ಠಾಪನಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜನೆ ಮಾಡಲಾಗಿದೆ. ಬರುವಂತಹ ಭಕ್ತಾದಿಗಳು ಹಾಗೂ ಕುಲಬಾಂಧವರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಇನ್ನು ಈ ಒಂದು ಕಾರ್ಯಕ್ರಮಕ್ಕೆ ಪರಮಪೂಜ್ಯ ಶ್ರೀ ಶ್ರೀ ಸೋಮಶೇಖರ ಸ್ವಾಮೀಜಿ ಅವರು, ಬಾಲ ಯೋಗಿ ಸಾಯಿ ಮಂಜುನಾಥ ಮಹಾರಾಜ ಶ್ರೀಗಳು, ನಂಜಾವದೂತ ಮಹಾಸ್ವಾಮಿಜಿಯವರು, ಸಿದ್ದಲಿಂಗ ಮಹಾಸ್ವಾಮಿಗಳು, ಪೂರ್ಣಾನಂದಪುರಿ ಮಹಾಸ್ವಾಮಿಗಳು ರಮಣಾನಂದ ಸ್ವಾಮಿಗಳು, ಸೇರಿದಂತೆ ರಾಜಕೀಯ ನಾಯಕರು ಮತ್ತು ಕುಲಬಾಂಧವರು ಭಾಗವಹಿಸಲಿದ್ದಾರೆ.

ಅಗ್ನಿ ಬನ್ನಿರಾಯಸ್ವಾಮಿ ದೇಗುಲ (Agnibanniraya Swamy Temple) ನಿರ್ಮಾಣದಿಂದ ಬದಲಾಗುವುದು ಸಮಾಜದ ದಿಕ್ಕು

ಇಷ್ಟು ದಿನಗಳ ಕಾಲ ಕುಲದೇವರು ಶ್ರೀ ಅಗ್ನಿ ಬನ್ನಿರಾಯಸ್ವಾಮಿಯನ್ನು (Agnibanniraya Swamy Temple) ಸಭೆ ಸಮಾರಂಭಗಳಲ್ಲಿ ಮಾತ್ರ ಪೂಜಿಸಲಾಗುತ್ತಿತ್ತು. ಇಂದು ಅದಕ್ಕೊಂದು ದೇವಾಲಯ ನಿರ್ಮಾಣ ಮಾಡಿರುವುದು ಸಮಾಜದ ಕುಲಬಾಂಧವರಲ್ಲಿ ಸಂತಸವನ್ನು ಮೂಡಿಸಿದೆ. ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯವು ಮುಂದಿನ ದಿನಗಳಲ್ಲಿ ಅಗ್ನಿಬನ್ನಿರಾಯ ಸ್ವಾಮಿಯ ಆಶೀರ್ವಾದದೊಂದಿಗೆ ಪ್ರಗತಿಯನ್ನು ಕಾಣಲಿ ಎನ್ನುವುದು ಎಲ್ಲರ ಆಶಯ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments