Thursday, December 12, 2024
Homeಜಿಲ್ಲೆತುಮಕೂರುAgni Bannirayaswamy Jayanti | ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಅದ್ಧೂರಿ ಆಚರಣೆಗೆ ಕರೆ ನೀಡಿದ ಅಗ್ನಿವಂಶ...

Agni Bannirayaswamy Jayanti | ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಅದ್ಧೂರಿ ಆಚರಣೆಗೆ ಕರೆ ನೀಡಿದ ಅಗ್ನಿವಂಶ ಕ್ಷತ್ರಿಯ ಸಮಾಜದ ಮುಖಂಡರು..!

ತುಮಕೂರು | ಕಳೆದ ಹಲವು ವರ್ಷಗಳಿಂದ ಅಗ್ನಿವಂಶ ಕ್ಷತ್ರಿಯರ (Agnivamsa Kshatriya) ಮೂಲಪುರುಷ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತೋತ್ಸವವನ್ನು (Agni Bannirayaswamy Jayanti) ಯಶಸ್ವಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿಯೂ ಕೂಡ ಮಾರ್ಚ್ 28 (March 28) ರಂದು ಇಡೀ ರಾಜ್ಯಾದ್ಯಂತ ಸಂಭ್ರಮದಿಂದ ಆಚರಣೆ ಮಾಡುವಂತೆ ಸಮಾಜದ ಹಿರಿಯ ಮುಖಂಡರು ಕರೆ ನೀಡಿದರು.

ತುಮಕೂರು ನಗರದ ಹನುಮಂತಪುರದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಗ್ನಿವಂಶ ಕ್ಷತ್ರಿಯ ಸಮುದಾಯದ ಮೂಲಪುರುಷ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಮುದಾಯದ ಹಿರಿಯ ಮುಖಂಡರಾದ ಕುಂಭಯ್ಯನವರು, ಮಾರ್ಚ್ 28ರಂದು ರಾಜ್ಯದ ಪ್ರತಿ ಹಳ್ಳಿಗಳಲ್ಲಿಯೂ ಕೂಡ ಅಗ್ನಿ ಬನ್ನಿರಾಯಸ್ವಾಮಿ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿ, ನಂತರ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರದ ವತಿಯಿಂದ ಆಚರಿಸುವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಚರಿಸಿ ಸರ್ಕಾರದ ಗಮನವನ್ನು ಸೆಳೆಯಬೇಕು ಎಂದರು.

ಸಮುದಾಯದ ಮೂಲಪುರುಷ ಅಗ್ನಿಬನ್ನಿರಾಯಸ್ವಾಮಿ ಜಯಂತೋತ್ಸವವನ್ನು ಆಚರಣೆ ಮಾಡುವ ಮೂಲಕ ಸಮಾಜ ಒಗ್ಗಟ್ಟಿನಿಂದ ಇರಬೇಕು. ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯವು ಸಣ್ಣ ಸಮುದಾಯವೆಂದು ಪರಿಗಣಿಸಿ ಸರ್ಕಾರವು ನಿರ್ಲಕ್ಷ ತೋರುತ್ತಿದೆ. ಈ ಮೂಲಕವಾಗಿ ಸರ್ಕಾರದ ಗಮನ ಸೆಳೆದು ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಅತಿ ಶೀಘ್ರದಲ್ಲೇ ಲೋಕಸಭೆ ಚುನಾವಣೆ ಸಮೀಪ ಬರಲಿದ್ದು ಸರ್ಕಾರ ಮತ್ತು ಚುನಾವಣಾ ಆಯೋಗದ ಆದೇಶದಂತೆ ಅಗ್ನಿಬನ್ನಿರಾಯಸ್ವಾಮಿ ಜಯಂತೋತ್ಸವವನ್ನು ಆಚರಿಸಲಾಗುವುದು. ಇದಕ್ಕೆ ಸಮಾಜದ ಎಲ್ಲಾ ಬಂಧುಗಳು ಸಮಾಜದ ಬಗ್ಗೆ ಗೌರವ ಇಟ್ಟುಕೊಂಡಿರುವ ಇತರೆ ಸಮಾಜದ ಮುಖಂಡರು ಕೂಡ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಇದೇ ಸಂದರ್ಭದಲ್ಲಿ ಸಮಾಜದ ಏಳಿಗೆಗೋಸ್ಕರ ದುಡಿದ ಮೊದಲ ಬಾರಿಗೆ ಅಗ್ನಿ ಬನ್ನಿರಾಯಸ್ವಾಮಿ ಜಯಂತೋತ್ಸವವನ್ನು ಇಡೀ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆಸಲು ಕಾರಣಕರ್ತರಾದ ಹಿರಿಯ ಚೇತನ ಪ್ರೆಸ್ ರಾಜಣ್ಣನವರಿಗೆ ಮೌನಚಾರಣೆ ಮಾಡುವ ಮೂಲಕ ಸಭೆಯಲ್ಲಿ ಗೌರವ ಸಲ್ಲಿಸಲಾಯಿತು.

ಈ ಸಭೆಯು ಪೇಟೆ ಯಜಮಾನರಾದ ಹನುಮಂತರಾಜು, ಕೋಟೆ ಯಜಮಾನರಾದ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಾಲ್ಕು ಕಟ್ಟೆ ಯಜಮಾನರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಅಗ್ನಿಬನ್ನಿರಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ ಎಲ್ ಕುಂಭಯ್ಯ, ಯ|| ಗಂಗಹನುಮಯ್ಯ, ರವೀಶ್ ಜಾಂಗೀರ್, ಎ ಶ್ರೀನಿವಾಸ್, ಎನ್ ಎಸ್ ಶಿವಣ್ಣ, ಹನುಮದಾಸ್, ಆಂಜಿನಪ್ಪ, ಜಯರಾಮು, ಮಾರುತಿ, ವಾಸುದೇವ್ ಹಾಗೂ ಯಜಮಾನರು ಆಣೇಕಾರರು ಸಮುದಾಯದ ಹಿರಿಯರು ಮುಖಂಡರು, ಯುವಕರ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments