ಮನರಂಜನೆ | ಕನ್ನಡ ಸಿನಿಮಾರಂಗ ಎಂದೂ ಮರೆಯದ ನಟಿ ಡಾ. ಲೀಲಾವತಿ (actress leelavathi) ತಮ್ಮ ವಯೋ ಸಹಜ ಆರೋಗ್ಯದ ಸಮಸ್ಯೆಯಿಂದ ಶುಕ್ರವಾರ ಸಂಜೆ ನಿಧನರಾಗಿದ್ದಾರೆ. ಇದೀಗ ಅವರ ಅಂತ್ಯಕ್ರಿಯೆಗೆ (funeral) ಸಕಲ ಸಿದ್ದತೆಗಳನ್ನು ಕೂಡ ಮಾಡಿಕೊಳ್ಳಲಾಗುತ್ತಿದೆ. ಇಂದು ನೆಲಮಂಗಲದ ಸೋಲದೇವನಹಳ್ಳಿ (Soladevanahalli) ತೋಟದ ಮನೆಯಲ್ಲಿ ಅವರ ಅಂತ್ಯಕ್ರಿಯೆಯನ್ನು (funeral) ನಡೆಸಲಾಗುತ್ತದೆ.
ಇದನ್ನು ಓದಿ : Actress Leelavathi | ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಲೀಲಾವತಿಯವರ ಅಂತಿಮ ದರ್ಶನಕ್ಕೆ ವ್ಯವಸ್ಥೆ..! – karnataka360.in
ಅಭಿಮಾನಿಗಳಿಂದ ಅಂತಿಮ ದರ್ಶನ
ಪುತ್ರ ವಿನೋದ್ ರಾಜ್ಯ ಸೂಚನೆಯಂತೆ ಆಪ್ತರ ಸಮ್ಮುಖದಲ್ಲಿ ಬೆಳಗ್ಗೆಯೇ ಜೆಸಿಬಿ ಬಳಸಿ ಫಾರ್ಮ್ ಹೌಸ್ ನಲ್ಲಿ ಸಮಾಧಿ ತೆಗೆಯುವ ಕಾರ್ಯ ಆರಂಭವಾಗಿದೆ. ಅತ್ತ ಫಾರ್ಮ್ ಹೊರ ಭಾಗದಲ್ಲೂ ಗಣ್ಯರು, ಸಾರ್ವಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲು ಪೊಲೀಸರಿಂದಲೂ ಸ್ಥಳದಲ್ಲಿ ಬ್ಯಾರಿಕೇಡ್ ಹಾಕಿ ಸಿದ್ಧತೆ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಅಭಿಮಾನಿಗಳು ಆಗಮಿಸುತ್ತಿದ್ದಾರೆ.
ಸೋಲದೇವನ ಹಳ್ಳಿ ಗ್ರಾಮಸ್ಥರ ಕಣ್ಣೀರು
ಲೀಲಾವತಿ ಅಮ್ಮ ನಮ್ಮಗೆಲ್ಲ ಅಮ್ಮನಂತಿದ್ರು ಅವರು ನೆಲಮಂಗಲಕ್ಕೆ ಬಂದ ನಂತರ ಈ ಭಾಗದಲ್ಲಿ ಬಹಳ ಅಭಿವೃದ್ಧಿ ಆಗಿತ್ತು. ಗ್ರಾಮಸ್ಥರ ಯಾವುದೇ ಕೆಲಸಗಳಿದ್ರೂ ಸರ್ಕಾರದವರೊಂದಿಗೆ ಮಾತನಾಡಿ ಬಗೆಹರಿಸುತ್ತಿದ್ರು. ಸ್ವಂತ ಖರ್ಚಿನಿಂದ ಆಸ್ಪತ್ರೆ, ರಸ್ತೆಗಳನ್ನು ಮಾಡಿಸಿದ್ರು ಅವರನ್ನು ಕಳೆದು ಕೊಂಡು ನಾವು ಅನಾಥರಾಗಿದ್ದೇವೆ ಎಂದು ಕಣ್ಣೀರಿಟ್ಟಿದ್ದಾರೆ ಸೋಲದೇವನ ಹಳ್ಳಿ ಗ್ರಾಮಸ್ಥರು.
ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ
ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಿಮ ದರ್ಶನಕ್ಕೆ ಇಲ್ಲೇ ಅವಕಾಶ ಮಾಡಿರುವ ಹಿನ್ನಲೆ ಸಾಕಷ್ಟು ಗಣ್ಯರು, ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆ ಕಲಾಕ್ಷೇತ್ರ ಸುತ್ತಮುತ್ತ ಬ್ಯಾರಿಕೇಡ್ ಹಾಕಿ ವ್ಯವಸ್ಥೆ ಮಾಡಿರುವ ಪೊಲೀಸ್ ಸಿಬ್ಬಂದಿ. ಗಣ್ಯರಿಗಾಗಿ ಪ್ರತ್ಯೇಕ ವಿಐಪಿ ಗೇಟ್ ವ್ಯವಸ್ಥೆ ಮಾಡಲಾಗಿದೆ
ಹಿಂದೂ ಸಂಪ್ರದಾಯದಂತೆ ಲೀಲಾವತಿ ಅಂತ್ಯಕ್ರಿಯೆ
ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರ ಆವರಣಕ್ಕೆ ಬರಲಿರುವ ಲೀಲಾವತಿ ಪಾರ್ಥಿವ ಶರೀರ. ಮಧ್ಯಾಹ್ನ 2:30 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ. 2:30 ರ ಬಳಿಕ ಸೋಲದೇವನಹಳ್ಳಿಗೆ ತೆರಳಲಿರುವ ಪಾರ್ಥಿವ, ಹಿಂದು ಸಂಪ್ರಾದಯದಂತೆ ಅಂತ್ಯಕ್ರಿಯೆ ನೆರವೇರಿಸಲಿರುವ ಕುಟುಂಬಸ್ಥರು.
ಲೀಲಾವತಿ ನಿವಾಸದಲ್ಲಿ ಸ್ಮಶಾನ ಮೌನ
ಸೋಲದೇವನಹಳ್ಳಿ ಲೀಲಾವತಿ ನಿವಾಸದಲ್ಲಿ ಸ್ಮಶಾನ ಮೌನ ಆವರಿಸಿದೆ. ಲೀಲಾವತಿಯವರ ಅಚ್ಚು ಮೆಚ್ಚಿನ ಶ್ವಾನ ಕರಿಯನ ಮುಖದಲ್ಲೂ ವೇದನೆ. ಮನೆಯ ಒಳಭಾಗ ಲೀಲಾವತಿಯವರ ಪೋಟೋ ಮುಂದೆ ಕುಳಿತು ನಾಯಿಯ ರೋದನೆ. ಹಲವು ವರ್ಷಗಳಿಂದ ಲೀಲಾವತಿಯವರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ಕರಿಯ. ರಾತ್ರಿಯಿಂದ ಮನೆಯಲ್ಲಿ ಲೀಲಾವತಿಯವರು ಕಾಣದ ಹಿನ್ನೆಲೆ ಪೋಟೋ ಮುಂದೆ ಕುಳಿತು ರೋಧಿಸುತ್ತಿರುವುದು ಕಂಡುಬಂತು.