Friday, December 13, 2024
Homeಸಿನಿಮಾಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹಾದಿ ಹಿಡಿದ ನಟ ಪ್ರಜ್ವಲ್‌ ದೇವರಾಜ್‌..!

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಹಾದಿ ಹಿಡಿದ ನಟ ಪ್ರಜ್ವಲ್‌ ದೇವರಾಜ್‌..!

ಮನರಂಜನೆ | ನಟ ಪ್ರಜ್ವಲ್‌ ದೇವರಾಜ್‌ ಕಳೆದ 5 ವರ್ಷಗಳಿಂದ ಅಭಿಮಾನಿಗಳ ಜತೆಗೆ ಬರ್ತ್‌ಡೇ ಆಚರಿಸಿಕೊಂಡಿಲ್ಲ. ಈ ಬಾರಿ ಫ್ಯಾನ್ಸ್‌ ಸಮ್ಮುಖದಲ್ಲಿ ಈ ಸಂಭ್ರಮವನ್ನು ಕಳೆಯಲು ಮನಸು ಮಾಡಿದ್ದಾರೆ. ಅದಕ್ಕಾಗಿ ಅವರು ದರ್ಶನ್‌ ಅವರ ಹಾದಿ ಹಿಡಿದಿದ್ದಾರೆ.

ಹೌದು,, ತಮ್ಮ ಹುಟ್ಟುಹಬ್ಬದ ದಿನ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಪ್ರಜ್ವಲ್ ದೇವರಾಜ್ ತಮ್ಮ ಅಭಿಮಾನಿಗಳು ಹಾಗೂ ಹಿಂಬಾಲಕರಿಗೆ ವಿಶೇಷ ಸಲಹೆಯನ್ನು ನೀಡಿದ್ದಾರೆ.

ಜುಲೈ 4 ರಂದು ಅವರ ಜನ್ಮದಿನ. ಈ ಬಾರಿಯ ಜನ್ಮದಿನವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ‘ಕಳೆದ ಐದು ವರ್ಷಗಳಿಂದ ಹುಟ್ಟುಹಬ್ಬದ ದಿನ ನಿಮ್ಮನ್ನು ಭೇಟಿ ಆಗೋಕೆ ಆಗಿಲ್ಲ. ಈ ವರ್ಷ ಜುಲೈ 4ರಂದು ನಿಮ್ಮನ್ನು ಭೇಟಿ ಮಾಡುತ್ತಿದ್ದೇನೆ. ಕೇಕ್, ಹಾರ ತರಬೇಡಿ. ಆ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಸಿ’ ಎಂದು ಪ್ರಜ್ವಲ್ ಕೋರಿದ್ದಾರೆ.

ಈ ಮುನ್ನ ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಕೇಕ್, ಹಾರದ ಬದಲು ಬಡವರಿಗೆ ಸಹಾಯ ಮಾಡಿ ಎಂದುಮನವಿ ಮಾಡಿದ್ದರು. ಇನ್ನು ಇತ್ತೀಚೆಗಷ್ಟೆ ಅವರ ‘ಜಾತರೆ’ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments