ಚಿಕ್ಕಮಗಳೂರು |ತಮ್ಮ ಕಾರ್ ನಿಲ್ಲಿಸಿ ಚಾರಣಕ್ಕೆ ಹೋಗಿದ್ದ ಪ್ರವಾಸಿಗರಿಗೆ ಮರಳಿ ತಮ್ಮ ಕಾರ್ ಬಳಿ ಬಂದಾಗ ಆಘಾತ ಕಾದಿತ್ತು. ಕಾರನ್ನು ನಿಲ್ಲಿಸಿದ ಜಾಗದಲ್ಲಿ ಮರವೊಂದು ಬಿದ್ದಿದ್ದು ಕಾರಿನ ಮುಂಭಾಗ ಫುಲ್ ಜಖಂಗೊಂಡಿತ್ತು.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಕಾಲಬೈರವೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಮರ ಬಿದ್ದು ಹೊಸ ಬಲೆನೋ ಕಾರು ಫುಲ್ ಜಖಂ ಆಗಿತ್ತು.
ಬೆಂಗಳೂರು ಮೂಲದ ಪ್ರವಾಸಿಗರು ಬೆಂಡಾಜೆ ಬೆಟ್ಟಕ್ಕೆ ಟ್ರಕ್ಕಿಂಗ್ ಗೆಂದು ಸುಮಾರು 10 ಕಿ.ಮೀ. ದೂರ ಹೋಗಿದ್ದರು. ಈ ವೇಳೆ ಭಾರಿ ಮಳೆ ಗಾಳಿಗೆ ಮರ ಉರುಳಿ ಬಿದ್ದಿದೆ. ಹೀಗಾಗಿ ಕಾರಿನ ಮೇಲೆ ಮರ ಬಿದ್ದಿರೋ ವಿಷಯ ಗೊತ್ತೇ ಇರಲಿಲ್ಲ.
ಇನ್ನೂ ಕಾರಿನಲ್ಲಿ ಯಾರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.