Friday, December 13, 2024
Homeಜಿಲ್ಲೆತುಮಕೂರುFamily politics | ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದು ದುರಂತ

Family politics | ವಿಜಯೇಂದ್ರರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿದ್ದು ದುರಂತ

ತುಮಕೂರು | ಭಾರತೀಯ ಜನತಾ ಪಾರ್ಟಿಯ (Bharatiya Janata Party) ಹೈಕಮಾಂಡ್‌ನ ನಾಯಕರು ನಾವು ಕುಟುಂಬ ವಿರೋಧಿಗಳು ಎಂದು ಹೇಳುತ್ತಾ ಬಂದರೂ ಸಹ ಇಂದು ಯಡಿಯೂರಪ್ಪನವರ (Yediyurappa) ಮುಂದೆ ತಲೆ ಬಗ್ಗಿಸಿ ಕುಟುಂಬ ರಾಜಕಾರಣ ಮಾಡಲು ಪ್ರೇರೆಪಿಸಿದಂತೆ, `ನಾ ಖಾವುಂಗ ನಾ ಖಾನೆ ದೂಂಗ’ ಎಂದ ನಾಯಕರು ಈಗ ಕುಟುಂಬ ರಾಜಕಾರಣವನ್ನು (Family politics) ಮುನ್ನೆಲೆಗೆ ತಂದಿರುವುದು ದುರಂತವೇ ಸರಿ ಎಂದು ಆಪ್ ಮುಖಂಡ ಎಂ.ಎಸ್. ಮಧುಸೂಧನ್ (M.S. Madhusudhan) ಟೀಕೆ ಮಾಡಿದ್ದಾರೆ.

Fireworks sale | ಪಟಾಕಿ ಮಾರಾಟ ಮಾಡುವ ಮಾರಾಟಗಾರರೇ ಎಚ್ಚರ..! ಈ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಿ – karnataka360.in

ಯಾವ ನೈತಿಕತೆ ಇಟ್ಟುಕೊಂಡು ಬಿಜೆಪಿ ಮಾತನಾಡುತ್ತದೆ ಎಂಬುದೇ ತಿಳಿಯದ ಹಾಗಾಗಿದೆ, ತಂದೆ ಮಗ, ಕುಟುಂಬ ಸದಸ್ಯರಿಗೇ ಎಲ್ಲಾ ಪದವಿಗಳು ದೊರೆತರೆ ಬೇರೆಯವರಿಗೆ ಅರ್ಹತೆ ಇದ್ದರೂ ಸಹ ಅವರಿಗೆ ಸ್ಥಾನಮಾನ ದೊರೆಯದು, ಬಿಜೆಪಿ ಮತ್ತು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಬಿ.ವೈ.ವಿಜಯೇಂದ್ರರ ಮೇಲೆ ಅನೇಕ ಆರೋಪಗಳಿದ್ದವು. ಇಂದು ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಹಾಸ್ಯಾಸ್ಪದ, ಇಂದು ರಾಜ್ಯದ ಜನರಿಗೆ ಏನನ್ನು ಸೂಚಿಸಿದಂತಿದೆ. ಇಂದು ಬಿಜೆಪಿ ಸಹ ಕುಟುಂಬ ರಾಜಕಾರಣದ ಹೊರತಾಗಿಲ್ಲ ಎಂದು ಎಎಪಿಯ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮಧುಸೂಧನ್ ಖಾರವಾಗಿ ಟೀಕೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments