Thursday, December 12, 2024
HomeಸಿನಿಮಾKamal Haasan | ಉಳಗನಾಯಗನ್ ಕಮಲ್ ಹಾಸನ್ ನಟಿಸುತ್ತಿರುವ 234ನೇ ಸಿನಿಮಾದ ಟೈಟಲ್ ವಿಶೇಷತೆ ಏನು...

Kamal Haasan | ಉಳಗನಾಯಗನ್ ಕಮಲ್ ಹಾಸನ್ ನಟಿಸುತ್ತಿರುವ 234ನೇ ಸಿನಿಮಾದ ಟೈಟಲ್ ವಿಶೇಷತೆ ಏನು ಗೊತ್ತಾ..?

ಮನರಂಜನೆ | ಉಳಗನಾಯಗನ್ ಕಮಲ್ ಹಾಸನ್ (Kamal Haasan) ಹಾಗೂ ವಿಷನರಿ ಡೈರೆಕ್ಟರ್ ಮಣಿರತ್ನಂ (Mani Ratnam) 37 ವರ್ಷದ ಬಳಿಕ ಮತ್ತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಕಮಲ್ (Kamal Haasan)  ನಟಿಸ್ತಿರುವ ಮಣಿರತ್ನಂ (Mani Ratnam)  ನಿರ್ದೇಶಿಸ್ತಿರುವ ಈ ಚಿತ್ರದ ಟೈಟಲ್ ರಿವೀಲ್ ಆಗಿದೆ. 2.55 ನಿಮಿಷದ ವಿಡಿಯೋ ಝಲಕ್ ಮೂಲಕ ಉಳಗನಾಯಗನ್ 234ನೇ ಸಿನಿಮಾದ ಶೀರ್ಷಿಕೆ ಏನು..? ಯಾವ ಜಾನರ್ ಎಂಬ ಬಗ್ಗೆ ಸಣ್ಣದೊಂದು ಇಂಟ್ ಸಿಕ್ಕಿದೆ.

Leo box office | ಗಲ್ಲಾಪೆಟ್ಟಿಗೆಯ ಕಲೆಕ್ಷನ್ ನಲ್ಲಿ ಜೈಲರ್ ಹಿಂದಿಕ್ಕಿತಾ ವಿಜಯ್ ಅಭಿನಯದ ಲಿಯೋ..? – karnataka360.in

ಕಮಲ್ ಹಾಗೂ ಮಣಿರತ್ನಂ ಜೋಡಿಯ ಸಿನಿಮಾಗೆ ‘ಥಗ್ ಲೈಫ್’ (Thug Life) ಎಂಬ ಶೀರ್ಷಿಕೆ ಇಡಲಾಗಿದೆ. ರಂಗರಾಯ ಸತ್ಯವೇಲ್ ನಾಯಕನ್ ಆಗಿ ಎಂಟ್ರಿ ಕೊಟ್ಟಿರುವ ಕಮಲ್ ಹಾಸನ್ ತಾನೊಬ್ಬ ಗ್ಯಾಂಗ್ ಸ್ಟರ್ ಅಂತಾ ಪರಿಚಯ ಮಾಡಿಕೊಳ್ಳುತ್ತಾರೆ. ಭರ್ಜರಿ ಆಕ್ಷನ್ ಮೂಲಕ ವಿರೋಧಿಗಳಿಗೆ ಟಕ್ಕರ್ ಕೊಡುವ ಉಳಗನಾಯಗನ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಮ್ಯೂಸಿಕ್ ಟೈಟಲ್ ಅನೌನ್ಸ್ ಮೆಂಟ್ ವಿಡಿಯೋದಲ್ಲಿ ಹೈಲೆಟ್ ಆಗಿದೆ.

ಪಕ್ಕ ಆಕ್ಷನ್ ಎಂಟರ್ ಟೈನರ್ ಕಥಾನಕ ‘ಥಗ್ ಲೈಫ್’ ಸಿನಿಮಾದಲ್ಲಿ ತ್ರಿಷಾ ಕೃಷ್ಣನ್, ದುಲ್ಕರ್ ಸಲ್ಮಾನ್, ಜಯಂರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಕಮಲ್ ಇಂಟರ್ ನ್ಯಾಷನಲ್ ಫಿಲ್ಮಂಸ್ ಹಾಗೂ ಮದ್ರಾಸ್ ಟಾಕೀಸ್ ನಡಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತಿ ನಿರ್ಮಿಸುತ್ತಿದ್ದಾರೆ.

ಉದಯನಿಧಿ ಸ್ಟಾಲಿನ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಎಆರ್ ರೆಹಮಾನ್ ಚಿತ್ರದ ಸಂಗೀತ ನಿರ್ದೇಶನ, ಶ್ರೀಕರ್ ಪ್ರಸಾದ್ ಸಂಕಲನ, ರವಿ ಕೆ ಚಂದ್ರನ್ ಛಾಯಾಗ್ರಾಹಣ ಥಗ್ ಲೈಫ್ ಸಿನಿಮಾದಲ್ಲಿದೆ. 1987ರಲ್ಲಿ ‘ನಾಯಕನ್’ ಸಿನಿಮಾ ರಿಲೀಸ್ ಆಯಿತು. ಕಮಲ್ ಹಾಸನ್ ನಟನೆಯ ಈ ಚಿತ್ರಕ್ಕೆ ಮಣಿರತ್ನಂ ಅವರ ನಿರ್ದೇಶನ ಇತ್ತು. ಇದಾದ ಬಳಿಕ ಇವರು ಒಟ್ಟಾಗಿ ಕೆಲಸ ಮಾಡಿಲ್ಲ. ಈಗ 37 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ಒಂದಾಗಿದ್ದು, ನಿರೀಕ್ಷೆ ಹೆಚ್ಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments