ಹಾಸನ | ಹಾಸನ ಜಿಲ್ಲೆಯ ಅರಸೀಕೆರೆ-ತಿಪಟೂರು ನ್ಯಾಷನಲ್ ಹೈವೇ 206 ರ ರಸ್ತೆಯ ಪಕ್ಕದಲ್ಲಿನ ಹೊನ್ನ ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗುವ ಬೋರೇಗೌಡರಿಗೆ ಸೇರಿದ ಜಮೀನಿನಲ್ಲಿ ಋಷಿಮುನಿಗಳು ಉಪಯೋಗಿಸುವಂತ ವಸ್ತುಗಳು ಜೋಡಿಸಿರುವ ರೀತಿಯಲ್ಲಿ ಕಂಡುಬಂದಿವೆ.
ಇಂದು ಬೆಳಿಗ್ಗೆ 7 ಗಂಟೆಗೆ ಗ್ರಾಮಸ್ಥರು ರಸ್ತೆಯಲ್ಲಿ ಹೋಗುವಾಗ ಇದನ್ನು ಕಂಡು ಶೆಟ್ಟಿಹಳ್ಳಿ ಗ್ರಾಮಸ್ಥರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಈ ವಿಷಯ ತಿಳಿದ ಕೂಡಲೇ ಅಕ್ಕ ಪಕ್ಕ ಗ್ರಾಮಗಳಾದ ಪನ್ ಸಮುದ್ರ, ಆದಿಹಳ್ಳಿ, ಎಚ್ ಎಸ್ ಬಿ ಕಾಲೋನಿ, ಸುಳೆಕೆರೆ ಗ್ರಾಮದ ನೂರಾರು ಜನರು ಜಮಾಯಿಸಿದ್ದರು.
![](https://i0.wp.com/karnataka360.in/wp-content/uploads/2023/10/WhatsApp-Image-2023-10-05-at-18.48.03.jpeg?resize=696%2C402&ssl=1)
ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸ್ಥಳೀಯ ಜನರು ಕೆಲವು ಋಷಿಮುನಿಗಳು ರಾತ್ರಿ ಸಮಯದಲ್ಲಿ ತಪಸ್ಸು ಮಾಡಿ ಹೋಗಿರಬಹುದು ಎಂದು ಹೇಳುತ್ತಿದ್ದಾರೆ. ಸುಮಾರು 12 ಜೊತೆ ಪಾದುಕೆಗಳು ಹಾಗೂ 28 ಕಮಂಡಲಗಳು ಸ್ಥಳದಲ್ಲಿ ಪತ್ತೆಯಾಗಿವೆ.