ಚಿಕ್ಕಬಳ್ಳಾಪುರ | ಜಿಲ್ಲಾಡಳಿತ ಕೈಗೊಂಡಿರುವ ಪ್ಲಾಸ್ಟಿಕ್ ನಿಷೇಧ ಅಭಿಯಾನದಡಿಯಲ್ಲಿ ಚಿಕ್ಕಬಳ್ಳಾಪುರ ನಗರಸಭಾ ಅಧಿಕಾರಿಗಳು ನಗರ ವ್ಯಾಪ್ತಿಯ ಅಂಗಡಿ ಮುಂಗಟ್ಟುಗಳನ್ನು ರೈಡ್ ಮಾಡಿ ಪ್ಲಾಸ್ಟಿಕ್ ಬಂಡಲ್ಗಳನ್ಮ ವಶಕ್ಕೆ ಪಡೆದರು. ಪ್ಲಾಸ್ಟಿಕ್ನ ಮರುಬಳಕೆ ಹೇಗೆ ಮುಖ್ಯವೋ, ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದು ಅದಕ್ಕಿಂತ ಮುಖ್ಯ. ನಾಗರಿಕರಾಗಿ ನಾವು ಈ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಪೌರಾಯುಕ್ತ ಮಂಜುನಾಥ್ ತಿಳಿಸಿದ್ದಾರೆ.
ಮಕ್ಕಳು ಮಾಡಿಕೊಳ್ಳಲು 54 ವರ್ಷದ ತಾತನ ಜೊತೆ ಜೂಟ್ ಆದ 24ರ ವಿವಾಹಿತ ಮಹಿಳೆ..! – karnataka360.in
ಜಿಲ್ಲಾಡಳಿತ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ದಾಳಿ ಮಾಡುತಿದ್ದಾರೆ. ನಗರ ವ್ಯಾಪ್ತಿಯ ಅಂಗಡಿಗಳಿಗೆ ಸಹಾಯ ಅಭಿಯಂತರ ಉಮಾಶಂಕರ್ ನೇತ್ರತ್ವದಲ್ಲಿ ದಾಳಿ ಮಾಡಲಾಗಿದೆ.
ಇದುವರೆಗೂ 2 ಟನ್ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದ್ದು 1 ಲಕ್ಷ 30 ಸಾವಿರ ದಂಡ ವಸೂಲಿ ಮಾಡಲಾಗಿದೆ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗಿದೆ ಆ ನಂತರ ದಾಳಿ ಮಾಡಿದ್ದು 5 ನೂರು ರೂಗಳಿಂದ 30 ಸಾವಿರ ರೂಪಾಯಿಗಳ ತನಕ ದಂಡ ವಿದಿಸಲಾಗಿದೆ. ಅಷ್ಟಕ್ಕೂ ಮುಂದುವರೆದರೆ ಕೇಸು ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದು ಪೌರಾಯಕ್ತ ಮಂಜುನಾಥ್ ತಿಳಿಸಿದರು.