ತುಮಕೂರು | ಎಸ್.ಬಿ.ಐ. ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಹಿರೇಹಳ್ಳಿ ಕೈಗಾರಿಕಾ ಪ್ರದೇಶ ತುಮಕೂರು ಕೇಂದ್ರದಲ್ಲಿ ಗ್ರಾಮೀಣ ನಿರುದ್ಯೋಗಿ ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಹ್ಯಾಂಡ್ ಎಂಬ್ರಾಯ್ಡರಿ ಅಂಡ್ ಫ್ಯಾಬ್ರಿಕ್ ಪೇಂಟಿಂಗ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತುಮಕೂರು ಜಿಲ್ಲೆಯ ಕನ್ನಡ ಓದಲು ಹಾಗೂ ಬರೆಯಲು ಬರುವಂತಹ 18 ರಿಂದ 40 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 13, 2023ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸಿಂಗನಹಳ್ಳಿ ಕಾಲೋನಿ, ಹಿರೇಹಳ್ಳಿ ಕೈಗಾರಿಕಾ ಪ್ರದೇಶ (ತುಮಕೂರು ನಿರ್ಮಿತಿ ಕೇಂದ್ರದ ಹತ್ತಿರ), ತುಮಕೂರು, ದೂ.ವಾ.ಸಂ. 0816-2243386, ಮೊ.ಸಂ. 9449173386, 9738351048 ನ್ನು ಸಂಪರ್ಕಿಸಬಹುದಾಗಿದೆ ಎಂದು ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.