Thursday, December 12, 2024
HomeಸಿನಿಮಾBhavapoorna Trailer Release | ಟ್ರೇಲರ್ ಮೂಲಕ ಮನಗೆದ್ದ "ಭಾವಪೂರ್ಣ" ಸಿನಿಮಾದಲ್ಲಿ ಏನೆಲ್ಲಾ ಇದೆ ಗೊತ್ತಾ..?

Bhavapoorna Trailer Release | ಟ್ರೇಲರ್ ಮೂಲಕ ಮನಗೆದ್ದ “ಭಾವಪೂರ್ಣ” ಸಿನಿಮಾದಲ್ಲಿ ಏನೆಲ್ಲಾ ಇದೆ ಗೊತ್ತಾ..?

ಮನರಂಜನೆ | ಚೇತನ್ ಮುಂಡಾಡಿ (Chetan Mundadi) ನಿರ್ದೇಶನದ, ಪ್ರಶಾಂತ್ ಅಂಜನಪ್ಪ ನಿರ್ಮಾಣದ ಹಾಗೂ ರಮೇಶ್ ಪಂಡಿತ್ (Ramesh Pandit) ನಾಯಕರಾಗಿ ನಟಿಸಿರುವ “ಭಾವಪೂರ್ಣ” (Bhavapoorna) ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಆನಂತರ ಚಿತ್ರದ ಕುರಿತು ತಂಡದ ಸದಸ್ಯರು ಮಾಹಿತಿ ನೀಡಿದರು.

Shahrukh Khan V/S Prabhas | ಶಾರುಖ್ ಖಾನ್ ‘ಜವಾನ್’, ಪ್ರಭಾಸ್ ‘ಸಲಾರ್’ ನಡುವೆ ಟಿಕೆಟ್ ಬುಕ್ಕಿಂಗ್ ಪೈಪೋಟಿ..! – karnataka360.in

” ಭಾವಪೂರ್ಣ” ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ ತೀರ ಯಾನ.  ಸಾವಿನಾಚೆಗೂ ತಾನು ಈ ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟುಹೋಗುವ  ಪ್ರಯತ್ನ ಎಂದು ಕೊಂಡು ಪ್ರತಿಹೆಜ್ಜೆಯಲ್ಲೂ ಪಡುವ ಬವಣೆ, ಆಗುವ ಒದ್ದಾಟ,  ಅವಘಡ ಮತ್ತು ಮನತಟ್ಟುವ ಮುಗ್ದ ತಮಾಷೆಗಳು. 

ಇನ್ನೊಬ್ಬ ಯುವಕ.  ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್ ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ  ಪ್ರೀತಿಯ ಪಯಣ.  ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು.ಇವರು ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ? ಎನ್ನುವುದೇ  ” ಭಾವಪೂರ್ಣ ” ಎದೆ ಬಡಿತದ ಕಥಾವಸ್ತುವಾಗಿ ಕಾಡುವುದು ಎಂದರು ನಿರ್ದೇಶಕ ಚೇತನ್ ಮುಂಡಾಡಿ.

ನನಗೆ ಸುಮಾರು ವರ್ಷಗಳಿಂದ ಚಿತ್ರರಂಗದವರೊಂದಿಗೆ ಒಡನಾಟವಿದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಚೇತನ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ‌. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ನಿರ್ಮಾಪಕ ಪ್ರಶಾಂತ್ ಆಂಜನಪ್ಪ ತಿಳಿಸಿದರು.

ಚಿತ್ರದಲ್ಲಿ ನಟಿಸಿರುವ ಶೈಲಶ್ರೀ ಧರ್ಮೇಂದ್ರ ಅರಸ್, ಅಥರ್ವ ಪ್ರಕಾಶ್, ಛಾಯಾಗ್ರಾಹಕ ಪ್ರಸನ್ನ, ಹಿನ್ನೆಲೆ ಸಂಗೀತ ನೀಡುರುವ ಅಕ್ಷಯ್ ಹಾಗೂ ಸಂಕಲನಕಾರ ಕೀರ್ತಿರಾಜ್ . ಡಿ. “ಭಾವಪೂರ್ಣ” ದ ಬಗ್ಗೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾ ಅಂಕಣಗಳಿಗಾಗಿ ರಾಷ್ಟ್ರೀಯ ಪ್ರಶಸ್ತಿ(ತೀರ್ಪುಗಾರರ ವಿಶೇಷ ಪ್ರಶಸ್ತಿ)ಪಡೆದಿರುವ ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಅವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಲಿಂಗದೇವರು ಹಾಗೂ ಸತ್ಯಪ್ರಕಾಶ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments