ನವದೆಹಲಿ | ದೇಶದಲ್ಲಿರುವಂತಹ ವಿಶ್ವವಿದ್ಯಾಲಯಗಳಲ್ಲಿ ಸುಮಾರು 20 ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು. ಇವುಗಳಿಗೆ ಯಾವುದೇ ಪದವಿ ಪ್ರಮಾಣಪತ್ರ ವಿತರಿಸುವ ಅಧಿಕಾರವಿಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ. ಆತಂಕಕಾರಿ ವಿಷಯವೆಂದರೆ ದೆಹಲಿಯಲ್ಲೇ ಇವುಗಳ ಸಂಖ್ಯೆ ಹೆಚ್ಚಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಯುಜಿಸಿ ಕಾರ್ಯದರ್ಶಿ ಮನೀಶ್ ಜೋಶಿ, ಯುಜಿಸಿ ಕಾಯ್ದೆಯ ನಿಯಮಾವಳಿಗೆ ವಿರುದ್ಧವಾಗಿ ಈ ವಿಶ್ವವಿದ್ಯಾಲಯಗಳು ಪದವಿ ಪ್ರಮಾಣಪತ್ರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಮಾಣಪತ್ರಗಳು ಉನ್ನತ ಶಿಕ್ಷಣಕ್ಕಾಗಲಿ, ಉದ್ಯೋಗಕ್ಕಾಗಲಿ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.
ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ
ನವದೆಹಲಿ
- ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಜಿಕಲ್ ಹೆಲ್ತ್ ಸೈನ್ಸ್ಸ್
- ಕಮರ್ಷಿಯಲ್ ಯುನಿವರ್ಸಿಟಿ ಲಿಮಿಟೆಡ್–ದರಿಯಾಗಂಜ್
- ಯುನೈಟೆಡ್ ನೇಶನ್ಸ್ ಯುನಿವರ್ಸಿಟಿ
- ವೃತ್ತಿಪರ ವಿಶ್ವವಿದ್ಯಾಲಯ
- ಎಡಿಆರ್–ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ
- ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ ಅಂಡ್ ಎಂಜಿನಿಯರಿಂಗ್
- ವಿಶ್ವಕರ್ಮ ಒಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್ಮೆಂಟ್
- ಆಧ್ಯಾತ್ಮಿಕ ವಿಶ್ವವಿದ್ಯಾಲಯ
ಉತ್ತರಪ್ರದೇಶ
- ಗಾಂಧಿ ಹಿಂದಿ ವಿದ್ಯಾಪೀಠ
- ನ್ಯಾಷನಲ್ ಯುನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ
- ನೇತಾಜಿ ಸುಭಾಷ್ ಚಂದ್ರ ಬೋಸ್ ಯುನಿವರ್ಸಿಟಿ (ಮುಕ್ತ ವಿಶ್ವವಿದ್ಯಾಲಯ)
- ಭಾರತೀಯ ಶಿಕ್ಷಾ ಪರಿಷದ್
ಆಂಧ್ರಪ್ರದೇಶ
- ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯುನಿವರ್ಸಿಟಿ
- ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ
ಪಶ್ಚಿಮ ಬಂಗಾಳ
- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್
- ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಗಳು
ಕರ್ನಾಟಕ
- ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ
ಕೇರಳ
- ಸೇಂಟ್ ಜಾನ್ಸ್ ಯುನಿವರ್ಸಿಟಿ
ಪುದುಚೇರಿ
- ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
ಮಹಾರಾಷ್ಟ್ರ
- ರಾಜಾ ಅರೇಬಿಕ್ ವಿಶ್ವವಿದ್ಯಾಲಯ