Thursday, December 12, 2024
Homeಜಿಲ್ಲೆಚಿಕ್ಕಮಗಳೂರುChikkamagaluru News | ತಡರಾತ್ರಿ ಗಾಳಿ ಮಳೆಗೆ ಕುಸಿದ ಮನೆ : ಪ್ರಾಣಾಪಾಯದಿಂದ ಪಾರಾದ ಇಡೀ...

Chikkamagaluru News | ತಡರಾತ್ರಿ ಗಾಳಿ ಮಳೆಗೆ ಕುಸಿದ ಮನೆ : ಪ್ರಾಣಾಪಾಯದಿಂದ ಪಾರಾದ ಇಡೀ ಕುಟುಂಬ

ಚಿಕ್ಕಮಗಳೂರು | ಕಾಫಿನಾಡು ಮಲೆನಾಡಿನ ಭಾಗಗಳಲ್ಲಿ  ಗಾಳಿ ಮಳೆ ಅಬ್ಬರ ಮುಂದುವರೆದಿದೆ. ಇನ್ನೂ ಮಳೆಯ ಆರ್ಭಟಕ್ಕೆ ಮನೆಯೊಂದು ಸಂಪೂರ್ಣ ಜಖಂ ಆಗಿರುವ ಘಟನೆ ಕೂಡ ನಡೆದಿದೆ. ಮನೆಯಲ್ಲಿದ್ದ ಕುಟುಂಬಸ್ಥರು ಇದೀಗ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಸಾಲುಮರ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಬೈರಯ್ಯ ಎಂಬುವರ ಮನೆಯಲ್ಲಿ ಮಲಗಿದ್ದಾಗ ಈ ಅವಘಡ ಸಂಭವಿಸಿದೆ. ಮನೆಗೆ ಸಂಪೂರ್ಣ ಹಾನಿ ಉಂಟಾಗಿದ್ದು, ಮನೆಯಲ್ಲಿದ್ದ ದವಸ ಧಾನ್ಯ, ಪಾತ್ರೆಗಳು  ಕೂಡ ನಾಶ ಆಗಿವೆ.

ಇನ್ನೂ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಮತ್ತು ಶಾಸಕರು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಬೈರಯ್ಯ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments