ಮನರಂಜನೆ | ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ನಿರ್ಮಿಸಿರುವ, ಪ್ರೇಮ್ ಸಿಡೇಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಈ ಮಣ್ಣಿನ ಹೆಮ್ಮೆಯ ಕಲೆಯಾದ ವೀರಗಾಸೆಯ ಕುರಿತಾದ ಜೊತೆಗೆ ತಂದೆ ಮಗನ ನಡುವಿನ ಭಾವನಾತ್ಮಕ ಪಯಣದ ಕುರಿತು ಮೂಡಿಬಂದಿರುವ ಸಂತೋಷ್ ಕೈದಾಳರವರ ನಿರ್ದೇಶನದ “ಪರಂವಃ” ಚಲನಚಿತ್ರದ ‘ಕಿರುದೀಪ ನೀ’ ಎಂಬ ಮೂರನೇ ಲಿರಿಕಲ್ ಹಾಡು ‘Saregama Kannada’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಈ ಹಾಡನ್ನು ಗಾಯಕ ಮೆಹಬೂಬ್ ಸಾಬ್ ಹಾಡಿದ್ದು, ನಾಗೇಶ್ ಕುಂದಾಪುರ, ಸಂಕೇತ್ ಅಂಬಲಿ ಹಾಗೂ ಕಿರಣ್ ಎನ್ ಆರ್ ಪುರ ಸೇರಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಈ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ವೀಕ್ಷಿಸಿದ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರು ಹಾಡನ್ನು ಮೆಚ್ಚಿ, ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ.
ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಜನರಿಂದ ಮನ್ನಣೆಗಳಿಸುತ್ತಿರೊ ಟೀಸರ್ ಹಾಗೂ ಮೊದಲೆರಡು ಲಿರಿಕಲ್ ಹಾಡುಗಳಿಗೆ ಮಾಧ್ಯಮ ಮಿತ್ರರಾದ ನೀವುಗಳು ಪ್ರೀತಿಯಿಂದ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದಂತೆ, ಈ ಹಾಡನ್ನು ಸಹ ಹೆಚ್ಚಿನ ಹೃದಯಗಳಿಗೆ ತಲುಪಿಸಲು ಸಹಕರಿಸಬೇಕೆಂದು ಚಿತ್ರತಂಡ ವಿನಂತಿ ಮಾಡಿದೆ.