ತುಮಕೂರು | ಇತ್ತೀಚೆಗೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಶ್ರೀ ಗೋಮುಖ ಗೋಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜಾನುವಾರಗಳು ಮೃತಪಟ್ಟಿದ್ದು ಉಳಿದಿರುವಂತಹ ಗೋವುಗಳನ್ನು ಸುರಭಿ ಗೋಶಾಲೆಗೆ ಸ್ಥಳಾಂತರ ಮಾಡಲಾಗಿದೆ.
ಹೌದು,, ಇತ್ತೀಚಿಗಷ್ಟೇ ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿಯ ಶ್ರೀ ಗೋಮುಖ ಗೋಶಾಲೆಯಲ್ಲಿ ಕುಡಿಯುವ ನೀರು, ಪಶು ಆಹಾರ ಇಲ್ಲದೆ ಅನೇಕ ಜಾನುವಾರುಗಳು ಮೃತಪಟ್ಟಿದ್ದವು. ಇದರ ವರದಿಯನ್ನು ಮಾಧ್ಯಮಗಳು ಮಾಡಿದ್ದು, ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದರಲ್ಲಿರುವಂತಹ ಉಳಿದ ಗೋವುಗಳ ರಕ್ಷಣೆ ಮಾಡುವಂತಹ ಜವಾಬ್ದಾರಿಯನ್ನು ಇದೀಗ ಮಧುಗಿರಿ ತಾಲೂಕಿನ ಚೆನ್ನಮಲ್ಲನಹಳ್ಳಿ ಬಳಿ ಇರುವ ಸುರಭಿ ಗೋ ಶಾಲೆ ವಹಿಸಿಕೊಂಡಿದೆ.
ರೆಡ್ಡಿಹಳ್ಳಿಯ ಗೋಮುಖ ಗೋಶಾಲೆಯಲ್ಲಿ 14 ದನ, 35 ಎಮ್ಮೆ ಸೇರಿದಂತೆ 49 ಜಾನುವಾರಗಳನ್ನು ಹಸ್ತಾಂತರಿಸಲು ಗೋಮುಖ ಗೋಶಾಲೆಯ ಪದಾಧಿಕಾರಿಗಳು ಲಿಖಿತವಾಗಿ ಒಪ್ಪಿರುವುದರಿಂದ ಸದರಿ ಜಾನುವಾರಗಳನ್ನು ಇಂದು ತಮ್ಮ ವಶಕ್ಕೆ ಪಡೆದುಕೊಂಡು ಸಮರ್ಪಕ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದು ಸುರಭಿ ಗೋ ಶಾಲೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಉಳಿದಿರುವಂತಹ ಜಾನುವಾರುಗಳಿಗೆ ಅಲ್ಲಿಯೂ ಕೂಡ ಸಮರ್ಪಕವಾದಂತಹ ಸೌಲಭ್ಯಗಳನ್ನು ಒದಗಿಸಲಾಗುತ್ತ ಅಥವಾ ಶ್ರೀ ಗೋಮುಖ ಗೋಶಾಲೆಯ ರೀತಿಯಂತೆಯೇ ನಡೆಸಿಕೊಳ್ಳಲಾಗುತ್ತಾ ಕಾದು ನೋಡಬೇಕಿದೆ.