ಬೆಂಗಳೂರು | ಬೆಂಗಳೂರು ಮೆಟ್ರೋ (Bangalore Metro) ರೈಲಿನಲ್ಲಿ ಯುವತಿಯರ ವೀಡಿಯೋಗಳನ್ನು ಅಕ್ರಮವಾಗಿ ರೆಕಾರ್ಡ್ ಮಾಡಿ, ಅದನ್ನು “ಮೆಟ್ರೋ ಚಿಕ್ಸ್” (Metro Chicks) ಎಂಬ ಇನ್ಸ್ಟಾಗ್ರಾಂ ಅಕೌಂಟ್ನಲ್ಲಿ ಅಪ್ಲೋಡ್ ಮಾಡಿದ ಘಟನೆ ನಾಗರೀಕ ಸಮಾಜದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿ, ಅಪರಿಚಿತ ವ್ಯಕ್ತಿ ವಿರುದ್ಧ ಐಟಿ ಆಕ್ಟ್ ಸೆಕ್ಷನ್ 67 ಹಾಗೂ ಭಾರತೀಯ ನ್ಯುಸನ್ಸ್ ಸಂಹಿತೆ (ಬಿಎನ್ಎಸ್) ಸೆಕ್ಷನ್ 78(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

“ಮೆಟ್ರೋ ಚಿಕ್ಸ್” (Metro Chicks) ಎಂಬ ಇನ್ಸ್ಟಾಗ್ರಾಂ ಅಕೌಂಟ್ನಿಂದ 13ಕ್ಕೂ ಹೆಚ್ಚು ವೀಡಿಯೋಗಳು ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋಗಳಲ್ಲಿ ಮೆಟ್ರೋ (Bangalore Metro) ರೈಲಿನ ಒಳಗೆ ಹಾಗೂ ಮೆಟ್ರೋ ಸ್ಟೇಶನ್ಗಳಲ್ಲಿ ಯುವತಿಯರ ಆಕ್ಷೇಪಾರ್ಹ ದೃಶ್ಯಗಳನ್ನು ರೆಕಾರ್ಡ್ ಮಾಡಲಾಗಿದೆ. ಅಕೌಂಟ್ನಲ್ಲಿ 5,538 ಫಾಲೋವರ್ಸ್ ಇದ್ದು, ಇದು ಹೆಚ್ಚು ಜನರಿಗೆ ತಲುಪಿರುವುದು ಗಂಭೀರತೆಗೆ ಕಾರಣವಾಗಿದೆ. ವಿಡಿಯೋಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸುದ್ದಿ ವೈರಲ್ ಆಗುತ್ತಿದ್ದಂತೆ ಅಕೌಂಟ್ನಲ್ಲಿದ್ದ ಎಲ್ಲ ವೀಡಿಯೋಗಳನ್ನು ಈಗಾಗಲೇ ಡಿಲೀಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆದರೂ ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದು, ತನಿಖೆಗೆ ತಾಂತ್ರಿಕ ನೆರವು ಪಡೆದುಕೊಳ್ಳಲಾಗುತ್ತಿದೆ.