ಮನರಂಜನೆ | ಕವಲುದಾರಿ ಮತ್ತು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರು ನಟಿಸುತ್ತಿರುವ ಬಹುಕೋಟಿ ಬಜೆಟ್ ನ ಚಿತ್ರವೊಂದು ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಸೆಟ್ಟೇರುವ ತಯಾರಿಯಲ್ಲಿದೆ. ರಿಷಿ ಅವರು ನಿರ್ಮಾಪಕರ ನಟನಾಗಿದ್ದು ತಮ್ಮದೇ ಪ್ರೇಕ್ಷಕ ವರ್ಗವನ್ನು ಹೊಂದಿದ್ದಾರೆ ಮತ್ತು ಕಥೆಯ ಆಯ್ಕೆಯಲ್ಲಿಯೂ ಕೂಡ ತುಂಬಾ ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಈ ಚಿತ್ರ ಜೂನ್ ಎರಡರಂದು ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಸಿನಿಮಾದ ಹೆಸರು. ನಿರ್ಮಾಣ ಸಂಸ್ಥೆ ಮತ್ತು ತಾರಾ ಬಳಗದ ಬಗ್ಗೆ ಜೂನ್ 2 ರಂದು ಚಿತ್ರತಂಡ ತಿಳಿಸಲಿದೆ. ಈ ಚಿತ್ರವನ್ನು ಡಿಯರ್ ವಿಕ್ರಂ ಸಿನಿಮಾ ಖ್ಯಾತಿಯ ನಿರ್ದೇಶಕ ಕೆ ಎಸ್ ನಂದೀಶ್ ಅವರು ನಿರ್ದೇಶನ ಮಾಡಲಿದ್ದಾರೆ.
ತಮ್ಮ ಪ್ರಥಮ ಚಿತ್ರ ಓ ಟಿ ಟಿ ಯಲ್ಲಿ ಬಿಡುಗಡೆಗೊಂಡು ಅದ್ಭುತ ಯಶಸ್ಸು ಸಾಧಿಸಿರುವುದು ನಿರ್ದೇಶಕರಿಗೆ ಮತ್ತೊಂದು ಚಿತ್ರ ಮಾಡಲು ಹುಮ್ಮಸ್ಸು ಮತ್ತು ಪ್ರೋತ್ಸಾಹ ಕೊಟ್ಟಿದೆ. ಡಿಯರ್ ವಿಕ್ರಂ ಚಿತ್ರವನ್ನು ಓಟಿಟಿಯಲ್ಲಿ ನೋಡಿದ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆಯು ತೆಲುಗಿನಲ್ಲಿ ರೀಮೇಕ್ ಮಾಡಲು ಮಾತುಕತೆ ನಡೆಸುತ್ತಿದೆ
ನೈಜ ಘಟನೆಗಳ ಆದರಿಸಿದ ಚಿತ್ರ “ಡಿಯರ್ ವಿಕ್ರಂ”, ನಕ್ಸಲ್ ಮತ್ತು ರಾಜಕೀಯ ಕಥಾಂದರ ಗಳನ್ನು ಒಳಗೊಂಡ ಚಿತ್ರವಾಗಿತ್ತು. ಓ ಟಿ ಟಿ ಯಲ್ಲಿ ಬಿಡುಗಡೆಗೊಂಡ ನಂತರ ತುಂಬಾ ಜನ ಇದು ಥಿಯೇಟರ್ ನಲ್ಲಿ ಬಿಡುಗಡೆ ಆಗಬೇಕಾಗಿತ್ತು ಎಂದು ಮಾತನಾಡಿದ್ದಾರೆ..
ಆದರೆ ನಿರ್ದೇಶಕರು ನೇರವಾಗಿ ಓಟಿಟಿ ನಲ್ಲಿ ಬಿಡುಗಡೆಗೊಂಡಿದ್ದಕ್ಕೆ ಯಾವುದೇ ಬೇಸರವಿಲ್ಲ ಯಾಕೆಂದರೆ ಪ್ರಸ್ತುತ ಕಾಲದಲ್ಲಿ ಬದಲಾವಣೆಗೆ ಹೊಂದಿಕೊಂಡು ಹೋಗುವುದು ಅನಿವಾರ್ಯ. ಥಿಯೇಟರ್ ನಷ್ಟೇ ಓಟಿಟಿ ಕೂಡ ಮನರಂಜನೆಯನ್ನು ಜನಕ್ಕೆ ತಲುಪಿಸುವ ಒಂದು ಮಾಧ್ಯಮ ಎಂದು ಹೇಳಿದ್ದಾರೆ.
ಆದರೆ ಈಗ ತಯಾರಿ ನಡೆಯುತ್ತಿರುವ ಈ ಚಿತ್ರ, ಚಿತ್ರಮಂದಿರಗಳಲ್ಲಿ ಮತ್ತು ಓ ಟಿ ಟಿ ಯಲ್ಲಿ ಬಿಡುಗಡೆಗೊಳ್ಳುತ್ತದೆ. ತಾರಾ ಬಳಗದಲ್ಲಿ ತೆಲುಗಿನ ಕೆಲವು ಪ್ರಖ್ಯಾತ ನಟರು ಕೂಡ ನಟಿಸುತ್ತಿದ್ದಾರೆ.