ತುಮಕೂರು | ನಗರದ ನೀಲಾಲಯ ನೃತ್ಯ ಕೇಂದ್ರದ 22ನೇ ವಾರ್ಷಿಕೋತ್ಸವದ ಅಂಗವಾಗಿ ಅಮೋಘ ಭರತನಾಟ್ಯ ನೃತ್ಯ ಸಮರ್ಪಣ ಕಾರ್ಯಕ್ರಮವನ್ನು ಬಾಲ ವಿಶ್ವನಾಥ್ ತಂಡದವರಿಂದ ಹಮ್ಮಿಕೊಳ್ಳಲಾಗಿದೆ.
ಮೇ 21 ರಂದು ಬೆಳಿಗ್ಗೆ 6.30 ಗಂಟೆಗೆ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಬಾಲ ವಿಶ್ವನಾಥ್ ತಂಡದಿಂದ ಭರತನಾಟ್ಯ, ಮಧ್ಯಪ್ರದೇಶದ ದೇವಾಸ್‌ನ ಪ್ರಫುಲ್‌ಸಿಂಗ್ ಗೆಹಲೋಟ್ ಮತ್ತು ತಂಡದಿಂದ ಕಥಕ್ ನೃತ್ಯ ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, 47 ಕಲಾವಿದರು ಇದರಲ್ಲಿ ಭಾಗವಹಿಸಲಿದ್ದಾರೆ.
ಪತ್ರಕರ್ತ ಎಸ್.ನಾಗಣ್ಣ, ಹರಿಕಥಾ ವಿದ್ವಾನ್ ಲಕ್ಷ್ಮಣದಾಸ್, ಸಂಸ್ಕಾರ ಭಾರತಿ ತುಮಕೂರು ಶಾಖೆ ಅಧ್ಯಕ್ಷ ಬಿ.ಆರ್.ನಟರಾಜಶೆಟ್ಟಿ, ಚಾರ್ಟೆಡ್ ಅಕೌಂಟೆಂಟ್ ಎಸ್.ವಿಶ್ವನಾಥ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.