ತುಮಕೂರು | ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ತುರುವೇಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಟಿ. ಕೃಷ್ಣಪ್ಪ (JDS MLA MT Krishnappa) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಕ್ರಮ ಬಡವರ ವಿರುದ್ಧ – ಎಂ.ಟಿ. ಕೃಷ್ಣಪ್ಪ (JDS MLA MT Krishnappa)
ರಾಜ್ಯಪಾಲರ ಈ ನಿರ್ಧಾರ ಬಡವರ ವಿರೋಧಿ ಕ್ರಮ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದ್ದಾರೆ. ಸರ್ಕಾರ ಒಳ್ಳೆಯ ತೀರ್ಮಾನ ತೆಗೆದುಕೊಂಡಿದೆ, ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಅವರು ಸರ್ಕಾರದ ಪರ ಬ್ಯಾಟಿಂಗ್ ಮಾಡಿದರು. ಮೈಕ್ರೋ ಫೈನಾನ್ಸ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.
ಇದನ್ನು ಓದಿ : Honeytrap woman | ಖತರ್ನಾಕ್ ಲೇಡಿಯ ಮದುವೆ ಆಟ ; ಬಲಿಯಾದ ಪುರುಷರೆಷ್ಟು ಜನ ಗೊತ್ತಾ..?
ಸಿದ್ದರಾಮಯ್ಯಗೆ ಮನವಿ – ಮೈಕ್ರೋ ಫೈನಾನ್ಸ್ ಸಾಲ ಮನ್ನಾ ಮಾಡಬೇಕಾ..?
ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ₹25,000 ಕೋಟಿ ರೈತರ ಸಾಲ ಮನ್ನಾ ಮಾಡಿದರು. ಅದೇ ರೀತಿ, ಸಿದ್ದರಾಮಯ್ಯ ಈ ಬಾರಿ ಮೈಕ್ರೋ ಫೈನಾನ್ಸ್ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯ ಅವರು ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ (JDS MLA MT Krishnappa) ಮಾಡಿದರು.
ಈ ತೀರ್ಮಾನವು ಬಡವರ ಪರ ಜಾರಿಯಾಗಬೇಕು ಎಂಬ ಹಠಧರ್ಮಿ ಅಭಿಪ್ರಾಯ (JDS MLA MT Krishnappa) ವ್ಯಕ್ತಪಡಿಸಿದರು. ರಾಜ್ಯಪಾಲರ ನಿರ್ಧಾರ ಬದಲಾವಣೆಯಾಗುತ್ತಾ.? ಸರ್ಕಾರ ಹೊಸ ತೀರ್ಮಾನ ಕೈಗೊಳ್ಳುತ್ತಾ..? ಎಂಬ ಪ್ರಶ್ನೆಗಳು ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಪ್ರಮುಖವಾಗಲಿವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರದ ಮುಂದಿನ ನಿರ್ಧಾರ ಕಾದುನೋಡಬೇಕಾಗಿದೆ.