Wednesday, March 12, 2025
Homeಜಿಲ್ಲೆತುಮಕೂರುHoneytrap woman | ಖತರ್ನಾಕ್ ಲೇಡಿಯ ಮದುವೆ ಆಟ ; ಬಲಿಯಾದ ಪುರುಷರೆಷ್ಟು ಜನ ಗೊತ್ತಾ..?

Honeytrap woman | ಖತರ್ನಾಕ್ ಲೇಡಿಯ ಮದುವೆ ಆಟ ; ಬಲಿಯಾದ ಪುರುಷರೆಷ್ಟು ಜನ ಗೊತ್ತಾ..?

ತುಮಕೂರು | ಮದುವೆಯಾಗುವ ನೆಪದಲ್ಲಿ ಪುರುಷರನ್ನು ಮೋಸಗೊಳಿಸಿ, ಚಿನ್ನಾಭರಣ ಹಾಗೂ ಹಣ ದೋಚುವ ಆರೋಪ ತುಮಕೂರು ನಗರದ ಸದಾಶಿವ ನಗರ ನಿವಾಸಿ  ಫಾರ್ಹಾನ ಖಾನಂ (29) (Honeytrap woman) ಎಂಬ ಮಹಿಳೆ ವಿರುದ್ಧ ಕೇಳಿ ಬಂದಿದೆ.   

ಹನಿಟ್ರ್ಯಾಪ್ (Honeytrap woman) ಮೂಲಕ ಫಾರ್ಹಾನ ಖಾನಂ ವಂಚನೆ 

ಸೋಷಿಯಲ್ ಮೀಡಿಯಾ ಮೂಲಕ ಪುರುಷರಿಗೆ ಗಾಳ ಹಾಕಿ, ಪರಿಚಯ ಮಾಡಿಕೊಂಡು ಚಿನ್ನಾಭರಣ, ಹಣ ದೋಚುತ್ತಿದ್ದಳು. ತಿಂಗಳಿಗೊಂದು ಮದುವೆ ಮಾಡಿಕೊಳ್ಳುವ ಮೂಲಕ ಬಿಂದಾಸ್ ಜೀವನ ನಡೆಸುತ್ತಿದ್ದಳು.  ಪ್ರೀತಿ, ಪ್ರೇಮ, ಮದುವೆ ಹೆಸರಿನಲ್ಲಿ ಪುರುಷರನ್ನು ಮೋಸಗೊಳಿಸಿ ಕಿಲಾಡಿ ಜೀವನ ನಡೆಸುತ್ತಿದ್ದಾರೆ ಎಂದು ಫಾರ್ಹಾನ ಖಾನಂ (29) ವಿರುದ್ಧ ಆರೋಪಗಳು ಕೇಳಿ ಬಂದಿವೆ.

ಇದನ್ನು ಓದಿ : Actor Darshan | ಸುಳ್ಳು ಸುದ್ದಿಗಳನ್ನು ನಂಬಬೇಡಿ : ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ನಟ ದರ್ಶನ್

ಪ್ರಕರಣದ ಹಿನ್ನಲೆ  ಮೊದಲ ಪತಿ ಗಂಭೀರ ಆರೋಪ

ಫಾರ್ಹಾನ ಖಾನಂನ ವಿರುದ್ಧ ಮಾಜಿ ಪತಿ ತುಮಕೂರಿನ ದಾನಾ ಪ್ಯಾಲೇಸ್ ಬಳಿಯ ನಿವಾಸಿ ಇದ್ರೀಸ್ ದೂರು ದಾಖಲಿಸಿದ್ದಾರೆ.  2014ರಲ್ಲಿ ಫಾರ್ಹಾನ ಖಾನಂ ಇದ್ರೀಸ್ ಅವರನ್ನು ಮದುವೆಯಾಗಿದ್ದರು.  ಮದುವೆಯ ಎಲ್ಲಾ ಖರ್ಚನ್ನು ಇದ್ರೀಸ್ ಅವರೇ ಭರಿಸಿದ್ದರು. 1.42 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದರು.  ಕೇವಲ 27 ದಿನಗಳ ಕಾಲ ಪತಿಯ ಜೊತೆ ಸಂಸಾರ ಮಾಡಿ ಫಾರ್ಹಾನ ಖಾನಂ ಗಂಡನ ಮನೆ ಬಿಟ್ಟು ತಾಯಿ ಮನೆಗೆ ಬಂದು ಸೇರಿದ್ದರು.

ಮೊದಲನೇ ಮದುವೆಯನ್ನು ಮುಚ್ಚಿಟ್ಟು, ಎರಡನೇ ಮದುವೆ 

ಫಾರ್ಹಾನ ಖಾನಂ (Honeytrap woman) ಮೊದಲೇ ಜಾಕೀರ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಇದ್ರೀಸ್ ಮೊದಲು ಇದನ್ನು ತಿಳಿಯದೇ ಮದುವೆಯಾಗಿದ್ದರು.  ಆದರೆ ನಂತರ ಈ ವಿಚಾರ ಬಹಿರಂಗವಾಯಿತು ಮೊದಲ ಪತಿಯೊಂದಿಗಿನ ಸಂಬಂಧ ಮುಚ್ಚಿಟ್ಟು ಮಾತನಾಡುತ್ತಿದ್ದಳು.  ಇದನ್ನು ಇದ್ರೀಸ್ ಪ್ರಶ್ನಿಸಿದಾಗ ಗಲಾಟೆ ಮಾಡಿ ಮನೆಯಿಂದ ಓಡಿಹೋಗಿದ್ದಳು.

 

ಇದ್ರೀಸ್ ವಿರುದ್ಧ ಗೂಂಡಾಗಿರಿ ಆರೋಪ ಮಾಡಿದ್ದ ಫರ್ಹಾನಾ..? 

ಇದ್ರೀಸ್ ತನ್ನ ಹಣ ಹಾಗೂ ಚಿನ್ನಾಭರಣ ವಾಪಸ್ ನೀಡಲು ಫಾರ್ಹಾನ ಖಾನಂಗೆ ಒತ್ತಾಯ ಮಾಡಿದ್ದರು.  ಆದರೆ ಬದಲಾಗಿ ಫಾರ್ಹಾನ ಖಾನಂ ಗುಂಡಾಗಳನ್ನು ಕಳುಹಿಸಿ ಇದ್ರೀಸ್ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿಸಿದ್ದಳು. ಇದೆ ವಿಷಯವಾಗಿ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದರೂ, ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಇದ್ರೀಸ್ ಆರೋಪಿಸಿದ್ದಾರೆ.  ನ್ಯಾಯಕ್ಕಾಗಿ ಇದೀಗ ಪೊಲೀಸ್ ಐಜಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಪೊಲೀಸ್ ತನಿಖೆ ಹಾಗೂ ಸತ್ಯಾಂಶ 

ಫಾರ್ಹಾನ ಖಾನಂ (Honeytrap woman) ಈಗ ಮೂವರು-ನಾಲ್ವರು ಪುರುಷರೊಂದಿಗೆ ಲವ್ವಿಡವ್ವಿ ನಡೆಸುತ್ತಿರುವುದಾಗಿ ಆರೋಪಿಸಲಾಗಿದೆ.  ಇಡೀ ಪ್ರಕರಣದಲ್ಲಿ ಯಾರದು ತಪ್ಪು..? ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.  ನ್ಯಾಯಕ್ಕಾಗಿ ಇದ್ರೀಸ್ ನ್ಯಾಯಾಲಯದ ಮೊರೆ ಹೋಗಿದ್ದು, ಮುಂದಿನ ಬೆಳವಣಿಗೆಯನ್ನು ಕಾದುನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments