ಬೆಂಗಳೂರು | ಬೆಂಗಳೂರಿನ ಕೊಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಅಪರಿಚಿತ ಶವ ಪೊಲೀಸರು (Bangalore Police) ನಡೆಸಿದ ತನಿಖೆಯಲ್ಲಿ ಕೇರಳದ ಖತರ್ನಾಕ್ ಕಳ್ಳ ವಿಷ್ಣು ಪ್ರಶಾಂತ್ (29) ಎಂದು ತಿಳಿದುಬಂದಿದೆ.
ಶವ ಪತ್ತೆ – ಶಾಕ್ ಆಗಿದ್ದ ಪೊಲೀಸರು (Bangalore Police)
ಜನವರಿಯಲ್ಲಿ ಬ್ರಾಂಡ್ ಫ್ಯಾಕ್ಟರಿ ಬಿಲ್ಡಿಂಗ್ನ ಬೇಸ್ಮೆಂಟ್ನಲ್ಲಿ ಕೊಳತೆ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಡಿ-ಕಂಪೋಸ್ ಆಗಿದ್ದ ಮೃತದೇಹವನ್ನು ಗುರುತಿಸಲು ಕಷ್ಟವಾಗಿತ್ತು. ಆದರೆ ಮೃತ ವ್ಯಕ್ತಿಯ ಕೈ ಮೇಲಿದ್ದ ಟ್ಯಾಟು ಮಹತ್ವದ ಸುಳಿವು ನೀಡಿತ್ತು.
ಇದನ್ನು ಓದಿ : C.S. Pura Government School | ಸಿ ಎಸ್ ಪುರ ಸರ್ಕಾರಿ ಶಾಲೆಗೆ 100ರ ಸಂಭ್ರಮ ಹಳೆ ವಿದ್ಯಾರ್ಥಿಗಳಿಗೆ ಆತ್ಮೀಯ ಆಮಂತ್ರಣ
ವಿಷ್ಣು ಪ್ರಶಾಂತ್ – ಖತರ್ನಾಕ್ ಕಳ್ಳನ ಕಥೆ
ವಿಷ್ಣು ಪ್ರಶಾಂತ್ ಕೇರಳದಲ್ಲಿ 30ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಚಿನ್ನಾಭರಣ, ಮೊಬೈಲ್ ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಿದ್ದವು. ಕೇರಳ ಪೊಲೀಸರು “ಕೋಕಾ” (KAAPA – Kerala Anti-Social Activities Prevention Act) ದಾಖಲಿಸಿದ್ದರು. ಒಂದು ವರ್ಷ ಜೈಲಿನಲ್ಲಿ ಇದ್ದ ನಂತರ ಬಿಡುಗಡೆಗೊಂಡು ಮತ್ತೆ ಕಳ್ಳತನ ಮುಂದುವರಿಸಿದನು. ಈ ಹಿನ್ನೆಲೆಯಲ್ಲಿ ಮತ್ತೆ “ಕೋಕಾ” ದಾಖಲಿಸಲು ಕೇರಳ ಪೊಲೀಸರು ತಯಾರಾಗಿದ್ದರು. ಪೊಲೀಸರ ಭಯದಿಂದ ತಲೆಮರೆಸಿಕೊಂಡು ತಮಿಳುನಾಡು, ನಂತರ ಬೆಂಗಳೂರಿಗೆ ಬಂದಿದ್ದನು.
ಕೊಣನಕುಂಟೆಯ ಬೇಸ್ಮೆಂಟ್ನಲ್ಲಿ ವಿಷ್ಣು ಕೊನೆಯ ದಿನಗಳು
ಬೀದಿ ಬೀದಿಯಲ್ಲಿ ತಿರುಗಾಡುತ್ತಿದ್ದ ವಿಷ್ಣು, ಕೊನೆಗೆ ಬ್ರಾಂಡ್ ಫ್ಯಾಕ್ಟರಿ ಬೇಸ್ಮೆಂಟ್ನಲ್ಲಿ ಕಾಟನ್ ಬಾಕ್ಸ್ ಹಿಂದೆ ಸೇರಿಕೊಂಡಿದ್ದನು. ಮೂರೇ ದಿನದಲ್ಲಿ ಶವ ಕೊಳೆತ ವಾಸನೆ ಬಂದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಶವದ ಮೂಲ ತಿಳಿದುಬಂದರೂ, ಸಾವಿನ ಕಾರಣ ಇನ್ನೂ ತಿಳಿದಿಲ್ಲ.
![](https://i0.wp.com/karnataka360.in/wp-content/uploads/2025/02/WhatsApp-Image-2025-02-07-at-10.39.25-AM-768x1024.jpeg?resize=696%2C928&ssl=1)
ಪೊಲೀಸರ (Bangalore Police) ಮುಂದಿನ ತನಿಖೆ – ಪೋಷಕರ ನಿರಾಕರಣೆ
ಪೊಲೀಸರು ವಿಷ್ಣು ಪ್ರಶಾಂತ್ನ ಪೋಷಕರನ್ನು ಸಂಪರ್ಕಿಸಿದರೆ, “ನಮಗೆ ಮೃತದೇಹ ಬೇಕಿಲ್ಲ” ಎಂದು ಅವರು ನಿರಾಕರಿಸಿದ್ದಾರೆ. ಹೀಗಾಗಿ, ಕೊಣನಕುಂಟೆ ಪೊಲೀಸರು ಸ್ವತಃ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ವರದಿಗಾಗಿ ಪೊಲೀಸರು ನಿರೀಕ್ಷಿಸುತ್ತಿದ್ದಾರೆ.
ಕೊನೆಗಾಣದ ಪ್ರಶ್ನೆಗಳು
- ವಿಷ್ಣು ಸಾವಿನ ಹಿಂದಿನ ನಿಜವಾದ ಕಾರಣವೇನು..?
- ಆತ ಸ್ವಾಭಾವಿಕವಾಗಿ ಸಾವನ್ನಪ್ಪಿದ್ದಾನಾ ಅಥವಾ ಬೇರೆ ಕಾರಣವಿದೆಯಾ..?
- ಹಳೆಯ ಶತ್ರುಗಳು ಇದರಲ್ಲಿ ಭಾಗಿಯಾಗಿದ್ದಾರಾ..?
ಈ ಎಲ್ಲಾ ಪ್ರಶ್ನೆಗಳ ಉತ್ತರಗಳು ಮರಣೋತ್ತರ ಪರೀಕ್ಷೆ ವರದಿಯಿಂದ ಮಾತ್ರ ಸ್ಪಷ್ಟವಾಗಲಿದೆ.