ತುಮಕೂರು | ಇಡೀ ಕರ್ನಾಟಕದಾದ್ಯಂತ ಅಪಾರ ಭಕ್ತ ಸಮೂಹವನ್ನು ಹೊಂದಿರುವ ತುಮಕೂರು ಜಿಲ್ಲೆಯ ಮಲ್ಲಸಂದ್ರದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಿಯ ದೊಡ್ಡ ಮನೆ ಮತ್ತು ಚಿಕ್ಕಮನೆಯ ನೂತನ ದೇವಸ್ಥಾನದ (Sri Mahalakshmi New Temple) ಉದ್ಘಾಟನೆ, ವಿಗ್ರಹ ಹಾಗೂ ವಿಮಾನ ಗೋಪುರ ಕಳಸ ಪ್ರತಿಷ್ಠಾಪನ ಕುಂಭಾಭಿಷೇಕ ಮಹೋತ್ಸವವನ್ನು ಫೆ. 5 2025 ಬುಧವಾರದಿಂದ ಫೆ. 9 2025ರ ಭಾನುವಾರದವರೆಗೆ ಆಯೋಜನೆ ಮಾಡಲಾಗಿದೆ.
ಇದನ್ನು ಓದಿ : Sangeet Recording Studio | ತುಮಕೂರಿನಲ್ಲಿ ಸಂಗೀತ್ ಶ್ರೀನಿವಾಸ್ ಹೊಸ ಹೆಜ್ಜೆ ; ಸಂಗೀತ್ ರೆಕಾರ್ಡಿಂಗ್ ಸ್ಟುಡಿಯೋ ಒಪನ್
ಮಹಾಲಕ್ಷ್ಮಿಯ ಅನುಗ್ರಹದಿಂದ ದೇವಾಲಯ (Sri Mahalakshmi New Temple) ನಿರ್ಮಾಣ ಕಾರ್ಯ ಆರಂಭ
ಸುಮಾರು ಎರಡುವರೆ ವರ್ಷದ ಹಿಂದೆ ದೇವಸ್ಥಾನದ (Sri Mahalakshmi New Temple) ಕಾಮಗಾರಿಯನ್ನು ನಡೆಸಲು ತೀರ್ಮಾನ ಮಾಡಲಾಯಿತು. ದೇವಸ್ಥಾನವನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಹೊರ ಭಾಗದಲ್ಲಿ ಕಳಶವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದೀಗ ದೇವಾಲಯ ಭಾಗಶಹ ಪೂರ್ಣಗೊಂಡಿದೆ.
ಎಲ್ಲ ಮುಖಂಡರು ಸೇರಿ ತೀರ್ಮಾನವನ್ನು ತೆಗೆದುಕೊಂಡು ತಾಯಿಯ ಆಶೀರ್ವಾದದಿಂದ ದೇವಾಲಯದ ನಿರ್ಮಾಣಕ್ಕೆ ಕೈ ಹಾಕಿದರು. ತಾಯಿಗೆ ಕೊಟ್ಟ ಮಾತಿನಂತೆ ಎರಡುವರೆ ವರ್ಷದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಗುತ್ತಿದೆ. ಭಕ್ತರು, ಅಕ್ಕಪಕ್ಕದ ಗ್ರಾಮಸ್ಥರು, ಮುಖಂಡರು ಎಲ್ಲರೂ ಸಹ ಕೈಜೋಡಿಸಿ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ.
ದೇವಾಲಯ ನಿರ್ಮಾಣಕ್ಕೆ (Sri Mahalakshmi New Temple) 25 ಸಾವಿರದಿಂದ 5 ಲಕ್ಷದ ವರೆಗೂ ದೇಣಿಗೆ
ಮಹಾಲಕ್ಷ್ಮಿ ತಾಯಿಗೆ ನಡೆದುಕೊಳ್ಳುವವರು ಶ್ರೀಮಂತರು ಇದ್ದಾರೆ, ಮಧ್ಯಮ ವರ್ಗದವರು ಇದ್ದಾರೆ, ಬಡವರು ಕೂಡ ಇದ್ದಾರೆ. 25,000 ಪ್ರತಿ ಕುಟುಂಬಕ್ಕೆ ಎಂದು ನಿಗದಿ ಮಾಡಿದಾಗ ಯಾರೂ ಕೂಡ ಇಲ್ಲ ಎನ್ನದೆ ಸಂತೋಷದಿಂದ ನೀಡಿದ್ದಾರೆ. 25,000 ದಿಂದ ಸುಮಾರು 5 ಲಕ್ಷದ ವರೆಗೂ ದೇಣಿಗೆ ನೀಡಿದವರಿದ್ದಾರೆ.
ಈ ದೇವಸ್ಥಾನವನ್ನು ನಿರ್ಮಾಣ ಮಾಡಲು ಆರಂಭಿಸಿದಾಗ ಕೇವಲ 3 ರಿಂದ 5 ಲಕ್ಷ ಮಾತ್ರ ಇತ್ತು. ತಾಯಿಯ ಆಶೀರ್ವಾದದಿಂದ ನಿರೀಕ್ಷೆಗೂ ಮೀರಿ ಧನಸಹಾಯವನ್ನು ಮಾಡಿದ್ದಾರೆ. ಯಾವುದೇ ಸರ್ಕಾರದಿಂದ ಅನುದಾನ ಇಲ್ಲ, ರಾಜಕೀಯ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ ವಿನಹ, ಯಾರಿಗೂ ಬಲವಂತ ಮಾಡಿಲ್ಲ. ಭಕ್ತಾದಿಗಳ ಸಹಕಾರದಿಂದ ನಿರ್ಮಾಣವಾದ ಈ ದೇವಸ್ಥಾನ ಶ್ರೀ ಮಹಾಲಕ್ಷ್ಮಿ ದೇವಾಲಯ (Sri Mahalakshmi New Temple).
ನೂರಾರು ವರ್ಷಗಳ ಇತಿಹಾಸವಿರುವ ಮಹಾಲಕ್ಷ್ಮಿ ದೇವಾಲಯ (Sri Mahalakshmi New Temple)
ಮಲ್ಲಸಂದ್ರದ ಮಹಾಲಕ್ಷ್ಮಿ ದೇವಾಲಯಕ್ಕೆ (Sri Mahalakshmi New Temple) ನೂರಾರು ವರ್ಷಗಳ ಇತಿಹಾಸವಿದೆ. ಹಿಂದೆ ಹುತ್ತ ಇರುವಂತಹ ಪ್ರದೇಶವನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿತ್ತು. ಅಂದಿನಿಂದ ಇಂದಿನವರೆಗೂ ಕೂಡ ಭಕ್ತರಿಗೆ ವರವನ್ನು ನೀಡುತ್ತಾ ಅವರನ್ನು ಕಾಪಾಡಿಕೊಂಡು ಮಹಾತಾಯಿ ಬರುತ್ತಿದ್ದಾಳೆ.
ತಾಯಿಯ ಅನುಗ್ರಹದಿಂದ ಇಂದು ವಿಗ್ರಹವನ್ನು ಮಾಡಲಾಗಿದೆ. ಇದರ ಪ್ರತಿಷ್ಠಾಪನೆಯನ್ನು ಕೂಡ ಮಾಡಲಾಗುತ್ತಿದೆ. ಸುಮಾರು 10 ರಿಂದ 12 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. 4 ರಿಂದ 5 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಾಣವಾಗಿದೆ. ಸುಮಾರು 5 ರಿಂದ 6 ಕೋಟಿ ವೆಚ್ಚದಲ್ಲಿ ರಾಜಗೋಪುರ, ಕಲ್ಯಾಣಿ, ಪೌಳಿಯನ್ನು ಮುಂದಿನ ದಿನಗಳಲ್ಲಿ ಮಾಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಎರಡುವರೆ ಮೂರು ವರ್ಷದಲ್ಲಿ ಇದೆಲ್ಲವನ್ನು ಕೂಡ ಕಂಪ್ಲೀಟ್ ಮಾಡುವ ಯೋಜನೆಯನ್ನು ಭಕ್ತರು ಇಟ್ಟುಕೊಂಡಿದ್ದಾರೆ.
ಇದನ್ನು ಓದಿ : Agnibanniraya Swamy Temple | ಕರ್ನಾಟಕದ ಪ್ರಥಮ ಅಗ್ನಿಬನ್ನಿರಾಯ ಸ್ವಾಮಿ ದೇವಾಲಯ ಲೋಕಾರ್ಪಣೆಗೆ ಕ್ಷಣಗಣನೆ
ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಎಲ್ಲಾ ರೀತಿಯ ವ್ಯವಸ್ಥೆ
ಬರುವಂತಹ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯಲ್ಲೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು ಸ್ವಯಂಸೇವಕರು, ಭಕ್ತಾದಿಗಳು ಜವಾಬ್ದಾರಿ ತೆಗೆದುಕೊಂಡಿದ್ದಾರೆ. ದಾಸೋಹವನ್ನು ಕೂಡ ನಡೆಸಲು ಭಕ್ತಾದಿಗಳು ಸ್ವಯಂ ಪ್ರೇರಿತರಾಗಿ ದವಸ ಧಾನ್ಯಗಳನ್ನು ತಂದು ಕೊಡುತ್ತಿದ್ದಾರೆ.
ಈ ಪೂಜಾ ಕಾರ್ಯದ ಸಮಯದಲ್ಲಿ ಮುಂಜಾನೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟ, ರಾತ್ರಿ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. 48 ದಿನಗಳ ಕಾಲ ಪ್ರತಿನಿತ್ಯ ದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ.
ಸುಮಾರು 3000 ಕುಟುಂಬಗಳು ಶ್ರೀ ಮಹಾಲಕ್ಷ್ಮಿಗೆ ವಕ್ಕಲು ಮನೆಗಳಾಗಿವೆ. ತುಮಕೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಯಲ್ಲಿಗಳಲ್ಲೂ ಭಕ್ತರಿದ್ದಾರೆ. ಅವರೆಲ್ಲರನ್ನೂ ಕೂಡ ಬೇಟಿ ಮಾಡಿ ಈಗಾಗಲೇ ಆಹ್ವಾನ ಪತ್ರಿಕೆಗಳನ್ನು ನೀಡಲಾಗಿದೆ. ಇದು ರಾಜಕೀಯ ಪ್ರೇರಿತವಾದಂತಹ ಕಾರ್ಯಕ್ರಮ ಅಲ್ಲ, ಧಾರ್ಮಿಕ ಕಾರ್ಯಕ್ರಮ, ಮತ್ತೊಬ್ಬರನ್ನು ವೈಭವೀಕರಣ ಮಾಡುವಂತಹ ಕಾರ್ಯಕ್ರಮ ಇದು ಅಲ್ಲವೇ ಅಲ್ಲ.
ಒಟ್ಟಾರೆಯಾಗಿ ಮಲ್ಲಸಂದ್ರದ ಮಹಾಲಕ್ಷ್ಮಿ ದೇವಾಲಯ ಲೋಕಾರ್ಪಣೆಗೆ (Sri Mahalakshmi New Temple) ಸಿದ್ದವಾಗಿದೆ. ಭಕ್ತಾದಿಗಳು ಆಗಮಿಸಿ ತಾಯಿಯ ಕೃಪೆಗೆ ಪಾತ್ರರಾಗಬೇಕು ಎನ್ನುವುದು ಶ್ರೀ ಮಹಾಲಕ್ಷ್ಮಿ ದೇವಸ್ಥಾನ ನಿರ್ಮಾಣ ಮತ್ತು ಸೇವಾ ಟ್ರಸ್ಟ್ ಆಡಳಿತ ಮಂಡಳಿ ಮತ್ತು ಸೇವಾಕರ್ತರ ಮನವಿ