Wednesday, February 5, 2025
Homeರಾಷ್ಟ್ರೀಯAndhra Pradesh Government | ವಾಟ್ಸಾಪ್‌ ಮೂಲಕವೇ ಸರ್ಕಾರಿ ಸೌಲಭ್ಯ ಕೊಡಲು ಮುಂದಾದ ಆಂಧ್ರಪ್ರದೇಶ ಸರ್ಕಾರ

Andhra Pradesh Government | ವಾಟ್ಸಾಪ್‌ ಮೂಲಕವೇ ಸರ್ಕಾರಿ ಸೌಲಭ್ಯ ಕೊಡಲು ಮುಂದಾದ ಆಂಧ್ರಪ್ರದೇಶ ಸರ್ಕಾರ

ಆಂದ್ರಪ್ರದೇಶ | ಆಂಧ್ರಪ್ರದೇಶ ಸರ್ಕಾರ (Andhra Pradesh Government) ಇಂದಿನಿಂದ ವಾಟ್ಸಾಪ್‌ ಮೂಲಕ 161 ಸರ್ಕಾರಿ ಸೇವೆಗಳನ್ನು ಒದಗಿಸಲು ವ್ಯವಸ್ಥೆ ಕಲ್ಪಿಸಿದೆ. ಇದರೊಂದಿಗೆ ಸಾರ್ವಜನಿಕರು ಪದೇ ಪದೇ ಕಚೇರಿಗಳಿಗೆ ಭೇಟಿ ನೀಡಬೇಕಾದ ಅವಶ್ಯಕತೆ ಕಡಿಮೆಯಾಗಲಿದೆ. ವಾಟ್ಸಾಪ್‌ ಮೂಲಕವೇ ಜನರು ಸರ್ಕಾರದ ವಿವಿಧ ಸೇವೆಗಳನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಮೆಸೇಜಿಂಗ್‌ ಆಧಾರಿತ ಸೇವೆಗಳು ಲಭ್ಯವಿರುವ ಇಲಾಖೆಗಳು

ಪ್ರಾರಂಭಿಕ ಹಂತದಲ್ಲಿ, ಈ ಸೇವೆಗಳನ್ನು ಇಂಧನ ಇಲಾಖೆ, ಎಪಿಎಸ್‌ಆರ್‌ಟಿಸಿ, ಕಂದಾಯ ಇಲಾಖೆ, ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್‌ ಒದಗಿಸಲಿದೆ. ಎರಡನೇ ಹಂತದಲ್ಲಿ ಹೆಚ್ಚಿನ ಸೇವೆಗಳನ್ನು ವಿಸ್ತರಿಸುವ ಯೋಜನೆ ಹೊಂದಲಾಗಿದೆ. 

ಸೈಬರ್ ಭದ್ರತೆ ಮತ್ತು ಡೇಟಾ ಸಂರಕ್ಷಣೆ

ಸಾರ್ವಜನಿಕರ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.  ಫೋರೆನ್ಸಿಕ್ಸ್ ಮತ್ತು ಸೈಬರ್ ಭದ್ರತೆಯನ್ನು ಬಲಪಡಿಸಲು ಸರ್ಕಾರ ಒತ್ತು ನೀಡಲಿದೆ. 2023 ಅಕ್ಟೋಬರ್ 22ರಂದು ಆಂಧ್ರಪ್ರದೇಶ ಸರ್ಕಾರ (Andhra Pradesh Government) ಮೆಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ವಾಟ್ಸಾಪ್‌ ಸೇವೆ ವಿಸ್ತರಿಸಲು ನಿರ್ಧಾರ ಕೈಗೊಂಡಿತ್ತು. 

ವಾಟ್ಸಾಪ್‌ ಮೂಲಕ (Andhra Pradesh Government) ಲಭ್ಯವಿರುವ ಸೇವೆಗಳು

ಮಾಲಿನ್ಯ ಕುರಿತ ದೂರು: ವಾಯು ಮಾಲಿನ್ಯ ಸೇರಿದಂತೆ ಪರಿಸರ ಸಂಬಂಧಿತ ಸಮಸ್ಯೆಗಳಿಗೆ ದೂರು ನೀಡಬಹುದು. 

ಸರ್ಕಾರಿ ಯೋಜನೆಗಳ ಮಾಹಿತಿ: ವಾಟ್ಸಾಪ್‌ಗೆ ಸಂದೇಶ ಕಳುಹಿಸುವ ಮೂಲಕ, ಸರ್ಕಾರ ಜಾರಿಗೆ ತರಿದ ಯೋಜನೆಗಳು, ಅದರ ಅರ್ಹತೆ ಮತ್ತು ಪ್ರಯೋಜನಗಳ ಬಗ್ಗೆ ಮಾಹಿತಿ ಪಡೆಯಬಹುದು. 

ಜನರ ಸಮಸ್ಯೆಗಳಿಗೆ ಪರಿಹಾರ: ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಿ, ಸಂಬಂಧಪಟ್ಟ ಅಧಿಕಾರಿಗಳ ಸಂಪರ್ಕ ವಿವರಗಳನ್ನು ಪಡೆಯಬಹುದು. ದೂರು ದಾಖಲಿಸಿದ ತಕ್ಷಣ ಉಲ್ಲೇಖ ಸಂಖ್ಯೆಯನ್ನು ಒದಗಿಸಲಾಗುವುದು. 

ಸಮಸ್ಯೆ ಪರಿಹಾರ ಪ್ರಗತಿ ಪರಿಶೀಲನೆ: ದೂರು ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ವಾಟ್ಸಾಪ್‌ನಲ್ಲಿ ನೇರವಾಗಿ ಪರಿಶೀಲಿಸಬಹುದು. 

ಸಾರ್ವಜನಿಕ ಮೂಲಸೌಕರ್ಯ ದೋಷಗಳ ವರದಿ: ಒಳಚರಂಡಿ ಕಾಲುವೆ ಸೋರಿಕೆ, ರಸ್ತೆ ಹೊಂಡಗಳು, ಇತ್ಯಾದಿ ಸಮಸ್ಯೆಗಳ ಫೋಟೋಗಳನ್ನು ತೆಗೆದು ಸರ್ಕಾರಕ್ಕೆ ಕಳುಹಿಸಲು ಅವಕಾಶ.  

ದೇವದಾಯ ಸೇವೆಗಳು: ಪ್ರಸಿದ್ಧ ದೇವಸ್ಥಾನಗಳಲ್ಲಿ ದರ್ಶನ ಟಿಕೆಟ್‌ಗಳು, ಕೊಠಡಿ ಕಾಯ್ದಿರಿಸುವಿಕೆ ಮತ್ತು ಕಾಣಿಕೆ ಸೇವೆಗಳನ್ನು ವಾಟ್ಸಾಪ್‌ ಮೂಲಕ ಪಡೆಯಲು ಅವಕಾಶ. 

ಭೂ ದಾಖಲೆ ಮತ್ತು ಪ್ರಮಾಣಪತ್ರಗಳು: ಕಂದಾಯ ಇಲಾಖೆಯಿಂದ ಭೂ ದಾಖಲೆಗಳು, ಒತ್ತಾಯ ಪತ್ರಗಳು, ಇತರ ಪ್ರಮಾಣಪತ್ರಗಳನ್ನು ವಾಟ್ಸಾಪ್‌ ಮೂಲಕ ಪಡೆಯಬಹುದು. 

ಈ ಹೊಸ ವ್ಯವಸ್ಥೆಯೊಂದಿಗೆ ಆಂಧ್ರಪ್ರದೇಶದ ನಾಗರಿಕರು ಸರಳ, ವೇಗವಾದ ಮತ್ತು ಸುಲಭ ಸೇವೆಗಳನ್ನು ತಮ್ಮ ಮೊಬೈಲ್‌ ಮೂಲಕವೇ ಪಡೆದುಕೊಳ್ಳುವಂತೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments