ನವದೆಹಲಿ | ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಹೈಕೋರ್ಟ್ ದರ್ಶನ್ ಸೇರಿದಂತೆ ಇತರ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನು ರದ್ದುಗೊಳಿಸಲು ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್ ಅವರ ದ್ವಿಸದಸ್ಯ ಪೀಠದ ಮುಂದೆ ಶುಕ್ರವಾರ ನಡೆಯಿತು.
ಜಾಮೀನು ಪ್ರಶ್ನಿಸಿ ಅರ್ಜಿ ಸುಪ್ರೀಂ ಕೋರ್ಟ್ ಹೇಳಿದ್ದೇನು..?
ಜಾಮೀನು ರದ್ದುಗೊಳಿಸುವ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ತಕ್ಷಣ ನಿರಾಕರಿಸಿತು. ಆದರೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಆಕ್ಷೇಪಣೆ ಅರ್ಜಿಯನ್ನು ಪರಿಗಣಿಸಿ, ಈ ಸಂಬಂಧ ಮುಂದಿನ ವಿಚಾರಣೆಗೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿತು. ಹೈಕೋರ್ಟ್ ನೀಡಿದ ವಿಸ್ತೃತ ಆದೇಶವನ್ನು ಪರಿಶೀಲಿಸಿ, ಇದನ್ನು ಮೆರಿಟ್ ಆಧಾರದಲ್ಲಿ ನೀಡಲಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ನೋಟಿಸ್ ನಂತರ ಮುಂದಿನ ಪ್ರಕ್ರಿಯೆಗಳೇನು..?
ಮುಂದಿನ ವಿಚಾರಣೆಯಲ್ಲಿ ಆರೋಪಿಗಳ ಪರ ವಕೀಲರು ಜಾಮೀನು ಮರುಸ್ಥಾಪನೆಗಾಗಿ ಸಮರ್ಥನೆ ನೀಡಲಿದ್ದಾರೆ. ಪೊಲೀಸರು ಜಾಮೀನು ನೀಡಬಾರದು ಎಂದು ವಾದ ಮಂಡಿಸಲಿದ್ದಾರೆ. ಎರಡು ಪಾರ್ಶ್ವದ ವಾದಗಳ ಬಳಿಕ ಸುಪ್ರೀಂ ಕೋರ್ಟ್ ತೀರ್ಮಾನ ಘೋಷಣೆ ಮಾಡಲಿದೆ.
ಜಾಮೀನು ರದ್ದಿಗೆ ಅರ್ಜಿ ಸಲ್ಲಿಸಿದ ಆರೋಪಿಗಳು
1. ಪವಿತ್ರಾ ಗೌಡ (ಎ 1)
2. ದರ್ಶನ್ (ಎ 2)
3. ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (ಎ 6)
4. ಅನುಕುಮಾರ್ ಅಲಿಯಾಸ್ ಅನು (ಎ 7)
5. ಆರ್. ನಾಗರಾಜು (ಎ 11)
6. ಎಂ. ಲಕ್ಷ್ಮಣ್ (ಎ 12)
7. ಪ್ರದೋಶ್ ಎಸ್. ರಾವ್ (ಎ 14)
ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ 1492 ಪುಟಗಳ ಕಡತವನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ.
ಇವುಗಳಲ್ಲಿ ಪ್ರಮುಖ ಅಂಶಗಳು
- ಹೈಕೋರ್ಟ್ ಜಾಮೀನು ಆದೇಶ
- ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಮತ್ತು ದೂರಿನ ಪ್ರತಿ
- ಮರಣೋತ್ತರ ಪರೀಕ್ಷಾ ವರದಿ
- ಆರೋಪಿಗಳ ಬಂಧನದ ಕಾರಣಗಳು (Grounds of Arrest)
- ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ
- ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳ ತರ್ಜುಮೆ
- ಸಿಡಿಆರ್ ಮತ್ತು ಪಂಚನಾಮೆ ವರದಿ
- ಆರೋಪಿಗಳ ಬಳಿ ವಶಪಡಿಸಿಕೊಂಡ ಡಿಜಿಟಲ್ ವಸ್ತುಗಳ ವಿಶ್ಲೇಷಣೆ ವರದಿ
- ಜಾಮೀನು ಅರ್ಜಿಯ ಸೆಷನ್ಸ್ ಕೋರ್ಟ್ ವಜಾ ಆದೇಶ ಪ್ರತಿ
- ದರ್ಶನ್ಗೆ ನೀಡಿದ್ದ ಮಧ್ಯಂತರ ಜಾಮೀನು ಆದೇಶ ಮತ್ತು ವೈದ್ಯಕೀಯ ವರದಿ
15 ಅಂಶಗಳಿಗೆ ಸಂಬಂಧಿಸಿದ ದಾಖಲೆಗಳನ್ನು ದಾಖಲಿಸಿರುವ ರಾಜ್ಯ ಸರ್ಕಾರ, ದರ್ಶನ್ ಸೇರಿದಂತೆ ಇತರ ಆರೋಪಿ ಜಾಮೀನು ರದ್ದುಗೊಳಿಸಲು ತನ್ನ ವಾದವನ್ನು ಮತ್ತಷ್ಟು ಬಲಪಡಿಸಿದೆ. ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪು ನೀಡುವ ತನಕ ಪ್ರಕರಣದ ಬೆಳವಣಿಗೆಗೆ ಸಾಕಷ್ಟು ತೀವ್ರ ಕುತೂಹಲ ಮೂಡಿಸಿದೆ.