Wednesday, February 5, 2025
Homeಜಿಲ್ಲೆತುಮಕೂರುMadhugiri DySP Ramachandrappa | ಜಾಮೀನಿನ ಮೇಲೆ ಹೊರಗೆ ಬಂದ ಕೂಡಲೆ ಅರೆಸ್ಟ್ ಆದ ಮಧುಗಿರಿ...

Madhugiri DySP Ramachandrappa | ಜಾಮೀನಿನ ಮೇಲೆ ಹೊರಗೆ ಬಂದ ಕೂಡಲೆ ಅರೆಸ್ಟ್ ಆದ ಮಧುಗಿರಿ ಡಿವೈಎಸ್ ಪಿ..!

ತುಮಕೂರು | ಇಡೀ ರಾಜ್ಯದಾದ್ಯಂತ ಸದ್ದು ಮಾಡಿದ್ದ ತುಮಕೂರು ಜಿಲ್ಲೆಯ ಮಧುಗಿರಿ ಡಿವೈಎಸ್ ಪಿ ರಾಮಚಂದ್ರಪ್ಪ (Madhugiri DySP Ramachandrappa) ರಾಸಲೀಲೆ ಪ್ರಕರಣದಲ್ಲಿ ಆರೋಪಿಯು ಜಾಮೀನು ಮೇಲೆ ಹೊರಬಂದಿದ್ದು ಇದೀಗ ಮತ್ತೆ ಡಿವೈಎಸ್ ಪಿ ಜೈಲು ಪಾಲಾಗಿದ್ದಾರೆ.

ಹೌದು.. ಡಿ ವೈ ಎಸ್ ಪಿ ರಾಮಚಂದ್ರಪ್ಪ (DySP Ramachandrappa) ಮೊದಲ ದೂರಿನಡಿ ನ್ಯಾಯಾಂಗ ಬಂಧನಲ್ಲಿದ್ದರು. ಜಾಮೀನು ಮಂಜೂರು ಮಾಡಿದ್ದ ಮಧುಗಿರಿ ಸೆಷನ್ಸ್ ನ್ಯಾಯಾಲಯ ಎರಡು ಲಕ್ಷ ಮೌಲ್ಯದ ಶೂರಿಟಿ ಬಾಂಡ್ ಸೇರಿದಂತೆ ಷರತ್ತು ಬದ್ದ ಜಾಮೀನು ನೀಡಿತ್ತು.

ಎರಡನೇ ಸಂತ್ರಸ್ತೆ ನೀಡಿದ ದೂರಿನಡಿ ಎಫ್ ಐ ಆರ್ ದಾಖಲಾಗಿತ್ತು. ಹೀಗಾಗಿ ಜಾಮೀನಿನಿಂದ ಹೊರಬಂದ ಕೂಡಲೇ ಅರೆಸ್ಟ್ ಆಗಿದ್ದಾರೆ. ಮತ್ತೆ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಮಧುಗಿರಿ ಪೊಲೀಸರು.  

ಮಧುಗಿರಿ ಡಿವೈಎಸ್ ಪಿ (DySP Ramachandrappa) ಕಚೇರಿಯಲ್ಲಿ ಮೊದಲ ಸಂತ್ರಸ್ತೆ ಲೈಂಗಿಕ ಕಿರುಕುಳ ನೀಡಿದ್ದ ಡಿವೈಎಸ್ಪಿ. ಬಳಿಕ ಮತ್ತೊಂದು ಸಂತ್ರಸ್ತೆ ದೂರು ನೀಡಿದ್ದಳು. ಮಧುಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments