ಬೀದರ್ | ಸಾವಿಗೂ ಮುನ್ನ ಡಿ.24 ರಂದು ಗುತ್ತಿಗೆದಾರ ಸಚಿನ್ ಪಾಂಚಾಳರವರ (Sachin Panchaal) ಚಲನವಲನದ ಸಿಸಿಟಿವಿ ದೃಶ್ಯ ಇದೀಗ ಲಭ್ಯವಾಗಿದೆ. ಬೀದರ್‌ನ ಪ್ರತಾಪ್ ನಗರದದಲ್ಲಿರೋ ಖಾಸಗಿ ಹೊಟೇಲ್‌ನಲ್ಲಿ ಎರಡು ತಾಸು ಕಾಲ ಕಳೆದಿದ್ದ ಸಚಿನ್ (Sachin Panchaal) ನಂತರ ಹೋಟೆಲ್ ಬಿಲ್ ಪಾವತಿ ಮಾಡಲು ಸ್ನೇಹಿತನಿಂದ ಹಣ ಹಾಕಿಸಿಕೊಂಡಿದ್ದನು ಎನ್ನಲಾಗಿದೆ.
ಮೋಹನ್ ಎಂಬ ಹೆಸರಿನ ವೇಟರ್ ನಂಬರ್‌ಗೆ ಫೋನ್‌ಪೇಯಿಂದ 1,500 ರೂ. ಬಿಲ್ ಪಾವತಿ ಮಾಡಿದ್ದನು. ಕೆಎಫ್ ಸ್ಟ್ರಾಂಗ್, ಕೆಎಫ್ ಟಿನ್, ಚಿಕನ್ ಮಸಾಲಾ, ತಂದೂರಿ ರೊಟ್ಟೆ, ಜೀರಾ ರೈಸ್ ತೆಗೆದುಕೊಂಡಿದ್ದನು. ಹೋಟೆಲ್‌ನಲ್ಲಿಯೇ ಕೂತು ಡ್ರಿಂಕ್ಸ್ ಮಾಡಿ ಊಟ ಮಾಡಿದ್ದನು ಸಚಿನ್.
ಬಳಿಕ ಉಳಿದ ಊಟವನ್ನ ಕಟ್ಟಿಸಿಕೊಂಡು ಕ್ಯಾರಿಬ್ಯಾಗ್‌ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಿದ್ದನು. ಡಿಸೆಂಬರ್ 24ರಂದು ಸಂಜೆ 6.25 ಗಂಟೆಗೆ ಹೋಟೆಲ್‌ಗೆ ಆಗಮಿಸಿದ್ದ ಈ ವೇಳೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಆಗಮಿಸಿ ನಂತರ ಮಾಸ್ಕ್ ಹಾಕಿಕೊಂಡೇ ವಾಪಸ್ ತೆರಳಿದ್ದನು.
ಮರಳಿ ರಾತ್ರಿ 8-38ಕ್ಕೆ ಹೊಟೆಲ್‌ನಿಂದ ಹೊರಗೆ ತೆರಳಿದ್ದನು. ಇದಕ್ಕೂ ಮೊದಲು ವೇಟರ್ ಫೋನ್ ತೆಗೆದುಕೊಂಡು ಸಹೋದರಿಗೆ ಫೋನ್ ಮಾಡಿದ್ದನು. ಇನ್ನೂ ಹಣ ಹಾಕಿದ್ದರ ಬಗ್ಗೆ ಎಫ್ಐಆರ್‌ನಲ್ಲಿ ಮೃತನ ಸಹೋದರಿ ಸವಿತಾ ಕೂಡ ಉಲ್ಲೇಖ ಮಾಡಿದ್ದಾರೆ.